Important
Trending

ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ | ರೈಲಿನಲ್ಲಿ ತೆರಳುವಾಗ ಇರಲಿ ಎಚ್ಚರ

ಭಟ್ಕಳ: ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದು ಗಭೀರವಾಗಿ ಗಾಯಗೊಂಡಿರುವ ಘಟನೆ  ಶಿರಾಲಿ ಬಡ್ಡುಕುಳಿಯಲ್ಲಿ ನಡೆದಿದೆ. ಗಂಭೀರಗಾಯಗೊಂಡ ವ್ಯಕ್ತಿ ಹರಿಕೃಷ್ಣ.ಪಿ ಕೇರಳ ಮೂಲದ ಕೊಲ್ಲಂ ಎಂದು ತಿಳಿದು ಬಂದಿದೆ.

ರೆಸಾರ್ಟ್‌ ನಲ್ಲಿ ಮಹಿಳೆಯ ಕೊಲೆ ಮಾಡಿ ನಾಟಕ: ಸಹಜ ಸಾವಂತೆ ಬಿಂಬಿಸಲು ಹೊರಟ ಇಬ್ಬರ ಬಂಧನ

ಈತ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈನಿಂದ ಕೇರಳದ ಕೊಲ್ಲಂ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಶಿರಾಲಿಯ ಬಡ್ಡುಕುಳಿ ಸಮೀಪ ಆಯಾತಪ್ಪಿ ರೈಲಿನಿಂದ ಬಿದ್ದು ಗಂಭೀರ ಗಾಯ ಗೊಂಡಿದ್ದಾನೆ. ನಂತರ ಅಲ್ಲಿನ ಸ್ಥಳೀಯರು 108ರ ಆಂಬ್ಯುಲೆನ್ಸ್ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ  ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದ ರೈಲ್ವೆ ಆರ್.ಪಿ.ಎಫ್ ಜಸ್ಟಿನ್ ಗಾಯಗೊಂಡ ವ್ಯಕ್ತಿ ಬಗ್ಗೆ ಮಾಹಿತಿ ಕಲೆಹಾಕಿ ಆತನ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಭಟ್ಕಳದ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಗಂಭೀರಗಾಯಗೊಂಡ ವ್ಯಕ್ತಿಯನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Related Articles

Back to top button