Important
Trending

ಉಮೇಶ ಮುಂಡಳ್ಳಿಯವರಿಗೆ ಭಟ್ಕಳ ದಲ್ಲಿ ನಾಗರಿಕ ವೇದಿಕೆ ಸನ್ಮಾನ

ಭಟ್ಕಳ- ಜಿಲ್ಲೆಯ ಭಾವಕವಿ, ಸುಗಮಸಂಗೀತ ಗಾಯಕ, ಸ್ವರಸಂಯೋಜಕ ಉಮೇಶ ಮುಂಡಳ್ಳಿ ಅವರನ್ನು ನಾಗರಿಕ ವೇದಿಕೆ (ರಿ) ಭಟ್ಕಳ ವತಿಯಿಂದ ಸನ್ಮಾನಿಸಲಾಯಿತು.ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಡಾ.ದತ್ತಾತ್ರೇಯ ನಾಯ್ಕ ಅವರಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ವೃತ್ತಿ ಜೀವನದ ಜೊತೆಯಲ್ಲಿಯೇ ಸುಮಾರು ಇಪ್ಪತ್ತು ವರ್ಷಗಳ ಕಾಲ ನಿರಂತರ ಸಾಹಿತ್ಯ ಸಂಗೀತ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯ ಹೊರರಾಜ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿಸುವ ಮೂಲಕ ಅನೇಕ ಪ್ರಶಸ್ತಿ ಗಳಿಗೆ ಭಾಜನರಾಗಿ ತಮ್ಮ ಹುಟ್ಟೂರಿಗೆ ತಾಲೂಕಿಗೆ ಹೆಸರು ತಂದ ಯುವ ಸಾಹಿತಿ ಮುಂಡಳ್ಳಿ ಅವರನ್ನು ಭಟ್ಕಳ ಅಮಿನಾ ಪ್ಯಾಲೇಸ್ ನಲ್ಲಿ ಶುಕ್ರವಾರ ನಾಗರಿಕ ವೇದಿಕೆಯಿಂದ ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಗೋಕರ್ಣ ರಥಬೀದಿಯಲ್ಲಿ ಸಂಚರಿಸಬೇಕು ಅಂದರೆ ಅರೆಬರೆ ಬಟ್ಟೆ ಧರಿಸುವಂತಿಲ್ಲ! ಹೊಸ ವಸ್ತ್ರಸಂಹಿತೆ

ಈ ಸಂಧರ್ಭದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ!! ಸವಿತಾ ಕಾಮತ್, ಡಾ!! ಲಕ್ಷ್ಮೀಶ ನಾಯ್ಕ ಡಾ. ಅರುಣಕುಮಾರ್ ಹಾಗೂ ಸ್ನೇಹ ಶಾಲೆಯ ಮುಖ್ಯಾಧ್ಯಾಪಕಿ ಮಾಲತಿ ಉದ್ಯಾವರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗರಿಕ ವೇದಿಕೆಯ ಅಧ್ಯಕ್ಷ ದೇವಯ್ಯ ನಾಯ್ಕ ಸಮಾಜದ ಸುರಕ್ಷತೆ ಮತ್ತು ಸುಸ್ತಿರತೆಯ ದೃಷ್ಟಿಯಿಂದ ಆಗಾಗ ಕೆಟ್ಟದನ್ನು ಕೆಡುಕನ್ನು ಪ್ರಶ್ನಿಸುವ ಸರಿಪಡಿಸಲು ಹೊರಾಡುವವರ ಅವಶ್ಯಕತೆ ಇದೆ. ಆಗ ಅಂತವರಿಗೆ ಅವಮಾನಗಳು ನಿಂದನೆಗಳು ಸರ್ವೆಸಾಮಾನ್ಯ. ದೃತಿಗೆಡದೆ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಅಂತ ಪ್ರಯತ್ನ ನಮ್ಮ ನಾಗರಿಕ ವೇದಿಕೆ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು. ನಮ್ಮ ಈ ಪ್ರಯತ್ನಕ್ಕೆ ಅನೇಕರ ಸಹಕಾರ ಅಗತ್ಯ ಇದೆ ಇದು ಜನರ ವೇದಿಕೆ ಎಂದರು.

ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ.ದತ್ತಾತ್ರೇಯ ನಾಯ್ಕ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸಂಘರ್ಷದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ತನ್ನೊಂದಿಗೆ ತಾಲೂಕಿನ ಇತರೆ ಸಾಧಕರಿಗೆ ನಾಗರಿಕ ವೇದಿಕೆ ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತಷದಾಯಕ ಎಂದರು. ಈ ಸಂದರ್ಭದಲ್ಲಿ ಸನ್ಮಾನಿತರೆಲ್ಲರು ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.

ಹಿರಿಯ ವಕೀಲರಾದ ಆರ್ ಆರ್ ಶ್ರೇಷ್ಠಿ, ,ನಿವೃತ ಬ್ಯಾಂಕ್ ಮ್ಯಾನೇಜರ್‌ ಎಂ.ಆರ್. ನಾಯ್ಕ. ಕಸಾಪ ಅಧ್ಯಕ್ಷ ಜಿ.ಆರ್. ನಾಯ್ಕ ಮೊದಲಾದವರು ಉಪಸ್ಥಿತರಿದ್ದು ಅಭಿಪ್ರಾಯ ಹಂಚಿಕೊಂಡರು. ನಾರಾಯಣ ನಾಯ್ಕ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ಭಟ್ಕಳ

Back to top button