Important
Trending

ಬಸ್‌ನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಅಜ್ಜಿ: ಏನಾಯ್ತು?

ಗೋಕರ್ಣ: ವಯಸ್ಸಾದ ಅಜ್ಜಿಯೊಬ್ಬಳು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದಳು. ಹೌದು, ಪ್ರವಾಸಕ್ಕೆ ಬಂದಿದ್ದ ವಯಸ್ಸಾದ ಅಜ್ಜಿಯೊಬ್ಬಳು ಬಸ್‌ನಲ್ಲಿ ಪ್ರವಾಸಿಗರು ಕುಳಿತುಕೊಳ್ಳುವ ಸಿಟ್ ನಲ್ಲಿಯೇ ಮೃತಪಟ್ಟಿರುವ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ಗೋಕರ್ಣ ತಲುಪಿದಾಗ ಕುಳಿತ ಸೀಟ್‌ನಲ್ಲಿಯೇ ವೃದ್ಧೆ ಸಾವನ್ನಪ್ಪಿದ್ದಾರೆ.

ಹಿಂಬದಿಯಿoದ ಬರುತ್ತಿದ್ದ ಟೆಂಪೋ ಡಿಕ್ಕಿ: ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬಡಿದು ಫೋಟೋಗ್ರಾಫರ್ ಸಾವು

ಗುಜರಾತ್ ರಾಜ್ಯದ ಈರಾಬಾಯಿ ನರಸಿಂಗ್ (90) ಮೃತ ಪಟ್ಟ ವೃದ್ದೆ ಎಂದು ತಿಳಿದುಬಂದಿದೆ. ಗುಜರಾತ್‌ದಿಂದ 40 ಜನರ ತಂಡ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ಗೋಕರ್ಣ ತಲುಪಿದಾಗ ಕುಳಿತ ಸೀಟ್‌ನಲ್ಲಿಯೇ ವೃದ್ಧೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈಕೆಗೆ ಅನಾರೋಗ್ಯ ಇತ್ತು ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತೆಪಡೆದು ಗೋಕರ್ಣಕ್ಕೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಉಸಿರಾಟ ತೊಂದರೆಯಿoದ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Related Articles

Back to top button