Focus News
Trending

ವಿದ್ಯಾರ್ಥಿಗಳಿಗೆ ಸಮರ್ಪಕವಾದ ಬಸ್ ಸೌಕರ್ಯಕ್ಕೆ ಆಗ್ರಹ: ಕರವೇಯಿಂದ ಮನವಿ

ಕುಮಟಾ: ತಾಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಬಸ್ ಸೌಕರ್ಯವಿಲ್ಲದೆ, ಬಸ್ ಪಾಸನ್ನು ಪಡೆದುಕೊಂಡು ಹಳ್ಳಿ ಹಾಗೂ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಾಯಂಕಾಲ ಸಾಕಷ್ಟು ರೀತಿಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಅಲ್ಲದೇ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಆದ ಕಾರಣ ದಯವಿಟ್ಟು ತಮ್ಮ ಘಟಕದಿಂದ ಈ ಕೂಡಲೇ ಯಾವ ಮಾರ್ಗಕ್ಕೆ ಎಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ ಎನ್ನುವ ಮಾಹಿತಿ ತಮಗಿರುತ್ತದೆ. ಅದರ ಅನುಸಾರವಾಗಿ ಬಸ್ಸನ್ನ ವ್ಯವಸ್ಥೆ ಮಾಡುವ ಮುಖಾಂತರ ಯಾವುದೇ ರೀತಿಯ ವಿದ್ಯಾರ್ಥಿಗಳಿಗೆ ತೊಂದರೆಯಾಗದoತೆ ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರ ಅವರ ನೇತೃತ್ವದಲ್ಲಿ ಕುಮಟಾ ಹೊಸ ಬಸ್ ನಿಲ್ಧಾಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಹಿಂಬದಿಯಿoದ ಬರುತ್ತಿದ್ದ ಟೆಂಪೋ ಡಿಕ್ಕಿ: ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬಡಿದು ಫೋಟೋಗ್ರಾಫರ್ ಸಾವು

ಸರಿಯಾದ ಹಣವನ್ನ ಪಾವತಿ ಮಾಡಿಸುತ್ತಾರೆ. ಆದರೆ ಸರಿಯಾದ ವ್ಯವಸ್ಥೆಯನ್ನು ಕುಮಟಾ ಕೆಎಸ್‌ಆರ್‌ಟಿಸಿ ಘಟಕವು ನಿರ್ವಹಿಸುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನ ಉಗ್ರ ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ ಎಂದು ಈ ವೇಳೆ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಬಲಿಂದ್ರ ಗೌಡ, ಮಹೇಶ್ ಕಾಡಿಗ, ಸುಬ್ರಹ್ಮಣ್ಯ ಗೌಡ, ನಾಗರಾಜ್ ಗೌಡ, ಶ್ರೀಕಾಂತ್ ಪಟಗಾರ, ಸಂದೇಶ್ ನಾಯಕ್, ನಾರಾಯಣ ಮುಕ್ರಿ, ದೀಪಕ್ ಭಂಡಾರಿ, ಗಜಾನನ್ ಅಂಬಿಗ ಮುಂತಾದವರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಮಟಾ ಕೆ.ಎಸ್.ಆರ್.ಟಿ.ಸಿ ಘಟಕದ ವ್ಯವಸ್ಥಾಪಕ ಸಿಂಧೂರ ಅವರು ಮನವಿ ಸ್ವೀಕರಿಸಿದರು.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ,ಕುಮಟಾ

Back to top button