Important
Trending

ಕೊಲೆ ಪ್ರಕರಣ: 13 ಜನರ ವಿರುದ್ಧ ಪ್ರಕರಣ ದಾಖಲು

ಭಟ್ಕಳ: ತಾಲೂಕಿನ ಬೆಣಂದೂರು ಗ್ರಾಮದಲ್ಲಿ ವ್ಯಕ್ತಿ ಯೋರ್ವನನ್ನು ನಿನ್ನೆ ಹಳೆ ದ್ವೇಷಕ್ಕಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬoಧಿಸಿದoತೆ 13 ಜನರ ಮೇಲೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ವ್ಯಕ್ತಿ ವ್ಯಕ್ತಿ ಪದ್ಮಯ್ಯ ಜಟ್ಟಪ್ಪ ನಾಯ್ಕ (44) ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಾದ ಜಯಂತ ನಾಯ್ಕ , ಮಂಜುನಾಥ ನಾಯ್ಕ , ದೇವೇಂದ್ರ ನಾಯ್ಕ , ಸುಬ್ರಮಣ್ಯ ನಾಯ್ಕ , ಬಲೀಂದ್ರ ನಾಯ್ಕ , ಈಶ್ವರ ನಾಯ್ಕ , ಗಣಪತಿ ನಾಯ್ಕ, ಕ್ರಷ್ಣ ನಾಯ್ಕ , ಸಂತೋಷ ನಾಯ್ಕ , ಮಹೇಶ ನಾಯ್ಕ , ಸುರೇಶ ನಾಯ್ಕ , ಸುನೀಲ ನಾಯ್ಕ , ಮಾದೇವ ನಾಯ್ಕ ಇವರೆಲ್ಲರೂ ತಾಲೂಕಿನ ಬೆಣಂದೂರು ಗ್ರಾಮದವರಾಗಿದ್ದಾರೆ

ಈ ಕುರಿತು ಕೊಲೆಯಾದ ವ್ಯಕ್ತಿಯ ಸಹೋದರ ಪರಮೇಶ್ವರ ನಾಯ್ಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ . ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪಿ.ಎಸ್.ಐ. ಎಚ್.ಓಂಕಾರಪ್ಪ ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button