Follow Us On

WhatsApp Group
Focus News
Trending

ಭಟ್ಕಳದಲ್ಲಿ ಸಚಿವ ನೂತನ ಮಂಕಾಳ್ ವೈದ್ಯರ ಕಾರ್ಯಾಲಯ ಉದ್ಘಾಟನೆ: ಪತ್ರಿಕಾ ವಿತರಕನ ಮಕ್ಕಳ ಕೈಯಲ್ಲಿ ದೀಪ ಬೆಳಗಿಸಿ ಸಚಿವ

ಭಟ್ಕಳ: ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್ ವೈದ್ಯರ ಭಟ್ಕಳದ ನೂತನ ಕಾರ್ಯಾಲಯವು(ಕಚೇರಿ) ತಾಲೂಕಿನ ಅಂಜುಮನ್ ಕಾಲೇಜು ರಸ್ತೆಯಲ್ಲಿ ಶುಭಾರಂಭಗೊoಡಿತು. ಕಾರ್ಯಾಲಯದ ಉದ್ಘಾಟನೆ ವೇಳೆ ಕಾರ್ಯಕ್ರಮಕ್ಕೆ ಬಂದ ಪತ್ರಿಕಾ ವಿತರಕನೋರ್ವನ ಮಕ್ಕಳ ಕೈಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿಸಿದ್ದು ವಿಶೇಷವಾಗಿತ್ತು.

ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವ ಮಂಕಾಳ್ ವೈದ್ಯ ಅವರು, 4 ತಿಂಗಳ ಬಳಿಕ ಭಟ್ಕಳದಲ್ಲಿ ನೂತನ ಕಾರ್ಯಾಲಯ ತೆರೆಯಲಾಗಿದೆ. ಶಾಸಕನಾಗಿ ಸಚಿವನಾದ ಬಳಿಕ ನನ್ನ ಕ್ಷೇತ್ರ ಜನತೆ ತೊಂದರೆಯಾಗದoತೆ ಈ ಹಿಂದೆ ನನ್ನ ಮನೆಯಲ್ಲೇ ಎಲ್ಲ ನನ್ನ ಜನತೆಗೆ ಸ್ಪಂದಿಸಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ನನ್ನ ಕಚೇರಿಗೆ ಬಂದು ಅವರ ಕೆಲಸ ಮಾಡಿಕೊಂಡು ಹೋಗಲು ಎಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಈಗಾಗಲೇ ಹೊನ್ನಾವರ ಮತ್ತು ಬೆಂಗಳೂರಿನಲ್ಲಿ ಕಚೇರಿ ತೆರೆಯಲಾಗಿದ್ದು ಕಾರವಾರದಲ್ಲಿ ಕಚೇರಿ ಕೆಲಸ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಕಚೇರಿ ತೆರೆಯಲಾಗುತ್ತದೆ. ಜನತೆಗೆ ಅನುಕೂಲವಾಗುವಂತೆ ಆಯಾ ಸ್ಥಳದಲ್ಲಿ ಕಚೇರಿ ತೆರೆಯಲಾಗಿದೆ. ನನ್ನ ಕಚೇರಿ ಯಲ್ಲಿ ನಾನು ಇಲ್ಲದೆ ಇದ್ದರೂ ಕೂಡ ಇಲ್ಲಿ ಕೆಲಸ ಆಗುವಂತೆ ಮಾಡಿದ್ದೇನೆ. ಒಂದೊಮ್ಮೆ ಪಿಎ.ಅಥವಾ ಪಿಎಸ್ ಹತ್ತಿರ ಕೆಲಸ ಆಗದೆ ಇದ್ದಲ್ಲಿ ನನ್ನ ಗಮನಕ್ಕೆ ತಂದು ಕೆಲಸ ಆಗುವಂತೆ ಮಾಡುತ್ತೇನೆ ಎಂದರು.

ಬೆಳ್ಳಿಗ್ಗೆ 10 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಕಚೇರಿಯಲ್ಲಿ ಕೆಲಸ ನಡೆಯಲಿದ್ದು, ನಾನು ಕಚೇರಿಯಲ್ಲಿ ಲಭ್ಯವಿರುವ ದಿನವನ್ನು ಮುಂಚಿತವಾಗಿ ತೇಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸಚಿವರಿಗೆ ಶುಭಾಶಯ ಕೋರಿದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button