Follow Us On

WhatsApp Group
Uttara Kannada
Trending

ಗುಣಮುಖನಾಗಿದ್ದ ಹೊನ್ನಾವರ ವ್ಯಕ್ತಿಗೆ ಮತ್ತೆ ಕರೊನಾ

ಕರೊನಾ ಟೆಸ್ಟ್ ವೇಳೆ ಪಾಸಿಟಿವ್
ತಾಲೂಕಿನಲ್ಲಿ ಇಂದು ಎರಡು ಕೇಸ್

[sliders_pack id=”3498″]

ಹೊನ್ನಾವರ: ತಾಲೂಕಿನಲ್ಲಿ ಇಂದು ಎರಡು ಕರೊನಾ ಪಾಸಿಟಿವ್ ದೃಢಪಟ್ಟಿದೆ. ತಾಲೂಕಿನ ಉಪ್ಪೋಣಿಯ 24 ವರ್ಷದ ಯುವಕ ಮತ್ತು ಪಟ್ಟಣದ ಗಾಂಧಿನಗರದ 40 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಪ್ಪೋಣಿಯ 24 ವರ್ಷದ ಯುವಕ ಉಡುಪಿಯಿಂದ ಆಗಮಿಸಿದ್ದ ಎಂದು ತಿಳಿದು ಬಂದಿದೆ. ಆದರೆ, ಹೊನ್ನಾವರ ಪಟ್ಟಣದ ಗಾಂಧಿನಗರದ 40 ವರ್ಷದ ಪುರುಷನಿಗೆ ಈ ಹಿಂದೆ ಕರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಯ ಬಳಿಕ ಗುಣಮುಖನಾಗಿದ್ದ. ಈಗ ದುಬೈಗೆ ತೆರಳಲು ಸಜ್ಜಾಗಿದ್ದು, ಕರೊನಾ ಟೆಸ್ಟ್ ಮಾಡಿಸಿದ ಸಂದರ್ಭದಲ್ಲಿ ಮತ್ತೆ ಪಾಸಿಟಿವ್ ಬಂದಿದೆ.

ಇದೇ ವೇಳೆ, ದಿನ ಲಯನ್ಸ್ ಕ್ಲಬ್ ಹೊನ್ನಾವರ ವತಿಯಿಂದ ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಶ್ರೇಯಾ ನಾಯ್ಕಳನ್ನು ಸನ್ಮಾನಿಸಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳ ಸನ್ಮಾನದ ನಂತರ ಪಟ್ಟಣ ವ್ಯಾಪ್ತಿಯಲ್ಲಿ ಮನೆ ಮನೆಗೆ ಪೇಪರ್ ಹಂಚುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹತ್ತಕ್ಕೂ ಹೆಚ್ಚು ಮಂದಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪ್ರದೀಪ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಮ್.ಜಿ.ನಾಯ್ಕ, ಲಯನ್ಸ್ ಸದಸ್ಯರಾದ ಎಸ್.ಜೆ.ಕೈರಾನ್, ಶ್ರೀಕಾಂತ ಹೆಗಡೇಕರ್, ಸುರೇಶ ಎಸ್, ವಸಂತ ಪ್ರಭು, ಡಾ.ಚಂದ್ರಶೇಖರ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು,

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button