Uttara Kannada
Trending

ಎಂ.ಎಸ್ಸಿ ಪರೀಕ್ಷೆಯಲ್ಲಿ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿಗಳು| ಜಿ.ಸಿ. ಕಾಲೇಜಿನ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ

ಅಂಕೋಲಾ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸ್ನಾತಕೋತ್ತರ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದ ಪರೀಕ್ಷೆಯಲ್ಲಿ ಕೆನರಾ ವೆಲಪೆರ್ ಟ್ರಸ್ಟ್ ನ, ಅಂಕೋಲಾದ ಗೋಖಲೆ ಸೆಂಟಿನರಿ ಕಾಲೇಜಿನ ( ಪಿ ಜಿ ಸೆಂಟರ್ ನ ) ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ನೂರು ಪ್ರತಿಶತ ಫಲಿತಾಂಶದ (100% ) ಸಾಧನೆ ಮಾಡಿದ್ದಾರೆ.

ಕಾಲೇಜಿನ ಕ್ರೋಡಿಕೃತ ಫಲಿತಾಂಶದಲ್ಲಿ ಕುಮಾರಿ ಸಿಂಧು ಕ್ರೋಡಿಕೃತ ಶೇ 79.21 (ಪ್ರಥಮ), ಕುಮಾರಿ ಜರುಷಾ ರೊಡ್ರಿಗ್ಯೂಸ್ ಶೇಕಡ 78.17 ( ದ್ವಿತೀಯ) ಹಾಗೂ ಕುಮಾರಿ ದಿವ್ಯಾ ರೇವಣಕರ್ ಶೇಕಡಾ 77.07 (ತೃತೀಯ) ಸ್ಥಾನ ಗಳಿಸುವುದರೊಂದಿಗೆ ವಿಶೇಷ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕೆನರಾ ವೆಲಫರ್ ಟ್ರಸ್ಟ್ ನ ಅಧ್ಯಕ್ಷ ಎಸ್. ಪಿ.ಕಾಮತ್, ಕಾರ್ಯದರ್ಶಿ ಕೆ.ವಿ.ಶೆಟ್ಟಿ, ನೂತನ ಪ್ರಾಚಾರ್ಯ ಡಾ. ಅಶೋಕ ಕುಮಾರ, ನಿಕಟಪೂರ್ವ ಪ್ರಾಚಾರ್ಯ ಡಾ.ವೆಂಕಟರಾಯ ಶೆಟ್ಟಿಗಾರ್, ಸಂಯೋಜಕ ಡಾ.ಪ್ರವೀಣ ನಾಯ್ಕ ಕಾಲೇಜಿನ ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button