Focus News
Trending

ಅವೈಜ್ಞಾನಿಕವಾಗಿ ಹೆದ್ದಾರಿ ಮಧ್ಯಭಾಗದಲ್ಲಿ ಗೋಡೆ: ಪಿಡಿಓಗೆ ಮೂಲಕ‌ ದೂರು

ಕುಮಟಾ: ಕಲಭಾಗ ಪಂಚಾಯಿತಿ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಹೆದ್ದಾರಿ ಮಧ್ಯಭಾಗದಲ್ಲಿ 4-ಅಡಿ ಎತ್ತರದ ಶಾಶ್ವತ ತಡೆಗೋಡೆ ನಿರ್ಮಿಸಲಾಗಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬಂದಿತ್ತು. ಅಲ್ಲದೆ, ಕೃಷಿ ಚಟುವಟಿಕೆಗೆ ಹೆಚ್ಚಿನ ಹಣ, ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಮಾನವ ಸಂಪನ್ಮೂಲ ತಗಲುವಂತೆ ಮಾಡಿ ಅಡ್ಡಿಪಡಿಸುತ್ತಿರುವ ಬಗ್ಗೆ ಯೋಜನಾ ನಿರ್ದೇಶಕರು ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಂಗಳೂರು ಇವರಿಗೆ ಕಲಭಾಗ ಪಂಚಾಯತ್ ಪಿಡಿಒ ಮೂಲಕ ದೂರು ನೀಡಲಾಗಿದೆ. ತಕ್ಷಣ ಕಾಮಗಾರಿ ನಿಲ್ಲಿಸಿ ಸ್ಥಳೀಯ ಪಂಚಾಯತ್ ನಲ್ಲಿ ಸಾರ್ವಜನಿಕ ಸಭೆ ಕರೆದು ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೋರಲಾಗಿದೆ.

ಇದಕ್ಕೆ ತಪ್ಪಿದಲ್ಲಿ ರಸ್ತೆ ತಡೆ ಮಾಡಿ ಯೋಜನಾ ನಿರ್ದೇಶಕರು ಬಂದು ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ತನಕ ಹೋರಾಟ ಮಾಡುವುದಾಗಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಗಜು ನಾಯ್ಕ್ ಅಳವೆಕೋಡಿ ಹಾಗೂ ಅಧ್ಯಕ್ಷರಾದ ವಿರುಪಾಕ್ಷ ನಾಯಕ್ ಅಳವೆಕೋಡಿ ಮತ್ತು ಸಂಚಾಲಕರಾದ ಭಾಸ್ಕರ್ ಪಟಗಾರ್ ಅಳವೆಕೋಡಿ ಇವರು ಕೋರಿದ್ದಾರೆ.

ಮನವಿಗೆ ಹಂದಿಗೋಣ, ಅಳವೆಕೊಡಿ ಭಾಗದ ಪಂಚಾಯಿತಿ ವ್ಯಾಪ್ತಿಯ ಜನರು ಸಹಿ ಮಾಡಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯ ಮೂಲಕ ಗೌರವಾಧ್ಯಕ್ಷರಾದ ಗಜು ನಾಯಕ ರಾಜ್ಯಪ್ರಧಾನ ಕಾರ್ಯದರ್ಶಿ ಜಾತ್ಯಾತೀತ ಜನತಾದಳ ಬೆಂಗಳೂರು ಇವರು ತಿಳಿಸಿರುತ್ತಾರೆ.

ವಿಸ್ಮಯ ನ್ಯೂಸ್,‌ ಕುಮಟಾ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button