Uttara Kannada
Trending

ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೀವಿತ ಪ್ರಮಾಣ ಪತ್ರ ಒದಗಿಸುವ ಕಾರ್ಯಕ್ರಮ

ಸಿದ್ದಾಪುರ: ಜನತೆ ಆರೋಗ್ಯವಂತರಾಗಿದ್ದರೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವದು ಅಗತ್ಯವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ|ಲಕ್ಮಿಕಾಂತ ನಾಯ್ಕ ಹೇಳಿದರು. ಅವರು ಪಟ್ಟಣದ ಬಾಲಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ ಆಯೋಜಿಸಿದ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೀವಿತ ಪ್ರಮಾಣ ಪತ್ರ ಒದಗಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶರೀರದ ಎಲ್ಲ ಅಂಗಗಳಿಗಿoತ ಮುಖ್ಯವಾದದ್ದು ಹೃದಯ. ಅದರ ಕುರಿತು ಹೆಚ್ಚಿನ ಕಾಳಜಿ ಅಗತ್ಯ. ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವದರಿಂದ ಮುಂದಾಗಬಹುದಾದ ಅನಾಹುತವನ್ನು ನಿವಾರಿಸಿಕೊಳ್ಳುವದು ಸಾಧ್ಯವಾಗುತ್ತದೆ. ವಿನಾ:ಕಾರಣ ದೇಹವನ್ನು ದಂಡಿಸಿಕೊಳ್ಳುವ ಅಗತ್ಯವಿಲ್ಲ. ನಿಯಮಿತ ಓಡಾಟ, ಪ್ರಾಣಾಯಾಮ ಆರೋಗ್ಯವನ್ನು ಸುಸ್ಥಿರವಾಗಿಡಲು ಸಹಾಯಕವಾಗುತ್ತದೆ. ನಿವೃತ್ತರು ಆರೋಗ್ಯವಂತರಾಗಿದ್ದರೆ ಸಮಾಜ ಸಕ್ರೀಯವಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಮಾತನಾಡಿ ಪ್ರತಿ ವರ್ಷ ನಿವೃತ್ತ ನೌಕರರು ಬ್ಯಾಂಕುಗಳಿಗೆ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕಿದ್ದು ಈ ಕುರಿತಂತೆ ಅವರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಅದನ್ನು ನಿವಾರಿಸುವ ದೃಷ್ಟಿಯಿಂದ ಎಲ್ಲ ರಾಷ್ಟಿçಕೃತ ಬ್ಯಾಂಕುಗಳ ವ್ಯವಸ್ಥಾಪಕರನ್ನು ಒಂದೆಡೆ ಸೇರಿಸಿ, ಸ್ಥಳದಲ್ಲೇ ನಿವೃತ್ತ ನೌಕರರಿಗೆ ಜೀವಿತ ಪ್ರಮಾಣಪತ್ರ ಒದಗಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಸ್.ಬಿ.ಐ. ವ್ಯವಸ್ಥಾಪಕ ರವಿಕುಮಾರ್, ಬ್ಯಾಂಕ್ ಆಪ್ ಬರೋಡಾದ ವ್ಯವಸ್ಥಾಪಕ ರಘು, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಭರತ್, ಸಿಂಡಿಕೇಟ ಬ್ಯಾಂಕ್ ವ್ಯವಸ್ಥಾಪಕ ಅಭಿಷೇಕ್ ಬ್ಯಾಂಕುಗಳು ನಿವೃತ್ತರಿಗೆ ನೀಡುವ ಸೇವೆ ಹಾಗೂ ಅವರು ವ್ಯವಹರಿಸಬೇಕಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ವಾಸುದೇವ ಶೇಟ್, ಖಜಾಂಚಿ ಎನ್.ವಿ.ಹೆಗಡೆ ಉಪಸ್ಥಿತರಿದ್ದರು. ಮೀರಾ ಹಬ್ಬು ಪ್ರಾರ್ಥಿಸಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು. ಸಂಘದ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button