Uttara Kannada
Trending

ತರಗತಿಗಳಿಗೆ ಮೊಬೈಲ್ ತರುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಂದ 200 ಕ್ಕೂ ಅಧಿಕ ಮೊಬೈಲ್ ವಶ : ಪೋಷಕರನ್ನು ಕರೆಯಿಸಿ ಮೊಬೈಲ್ ಹಸ್ತಾಂತರ

ಕುಮಟಾ: ಕಾಲೇಜಿನ ಆವರಣದಲ್ಲಿ ಹಾಗೂ ತರಗತಿಗಳಲ್ಲಿ ಮೊಬೈಲ್‌ಗಳನ್ನು ಬಳಸಬಾರದೆಂದು ಸೂಚಿಸಿರುವಾಗಲೂ ಸಹ ಕುಮಟಾ ತಾಲೂಕಿನ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳಿಗೆ ಮೊಬೈಲ್‌ಗಳನ್ನು ತರುತ್ತಿದ್ದಾರೆ ಎಂಬ ವಿಷಯ ತಿಳಿದಿದೆ. ಹೀಗಾಗಿ ತರಗತಿಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ತರಗತಿಯಲ್ಲಿಯೇ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಮೊಬೈಲ್‌ಗಳನ್ನು ವಶಪಡಿಸಿಕೊಂಡ ಪ್ರಾಧ್ಯಾಪಕರು, ಪಾಲಕರನ್ನು ಕರೆದುಕೊಂಡು ಬಂದು ಮೊಬೈಲ್ ಗಳನ್ನು ತೆಗೆದುಕೊಂಡು ಹೋಗಬೇಕೆಂದು ಸೂಚಿಸಲಾಗಿತ್ತು.

ಈ ಸಂಬoಧ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜು ನೆಲ್ಲಕೇರಿ ಇದರ ಪ್ರಾಂಶುಪಾಲರಾದ ಶತೀಶ ನಾಯ್ಕ ಅವರು ಮಾತನಾಡಿ, ಭೌತಿಕವಾಗಿ ತರಗತಿಗಳು ಪ್ರಾರಂಭವಾದ ಬಳಿಕ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿಲ್ಲವಾಗಿದ್ದು, ಆದ ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ಮೊಬೈಲ್‌ಗಳನ್ನು ತರಬಾರದೆಂದು ಈ ಹಿಂದೆಯೇ ಎಚ್ಚರಿಕೆಯನ್ನು ನೀಡಲಾಗಿದೆ.

ಇದೀಗ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಬಳಸುತ್ತಾರೆ ಎಂಬ ವಿಷಯ ಗಮಕ್ಕೆ ಬಂದ ಕಾರಣದಿಂದಾಗಿ ತರಗತಿಯಲ್ಲಿ ತಪಾಸಣೆ ನಡೆಸಿದ ವೇಳೆ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳಿಂದ ಗುರುವಾರ ಮೊಬೈಲ್ ವಶಪಡಿಸಿಕೊಂಡು ಕಾಲೇಜಿನ ಆವರಣದಲ್ಲಿ ಇನ್ನು ಮುಂದೆ ಮೊಬೈಲ್ ಬಳಕೆ ಮಾಡಬಾರದೆಂದು ಪುನಃ ಎಚ್ಚರಿಕೆ ನೀಡಿ, ಅವರವರ ಪಾಲಕರನ್ನು ಕರೆಯಿಸಿ ವಶಪಡಿಸಿಕೊಂಡ ಮೊಬೈಲ್‌ಗಳನ್ನು ವಾಪಾಸ್ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಮೋಬೈಲ್ ಪೋನ್ ಅನಿವಾರ್ಯವಾಗಿದ್ದಲ್ಲಿ, ಅಂತಹ ವಿದ್ಯಾರ್ಥಿಗಳು ತರಗತಿಯ ಉಪನ್ಯಾಸಕರಿಗೆ ವಿಷಯ ತಿಳಿಸಿದರೆ, ಮೊಬೈಲ್‌ಗಳನ್ನು ಕಾಲೇಜಿನ ಆವರಣದ ಹೊರಭಾಗದಲ್ಲಿ ಬಳಸಲು ಅವಕಾಶ ನೀಡಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button