Follow Us On

Google News
Uttara Kannada
Trending

ಆಯತಪ್ಪಿ ಬಾವಿಗೆ ಬಿದ್ದ ಕಾಡುಹಂದಿ: ಅರಣ್ಯಾಧಿಕಾರಿಗಳ ಯಶಸ್ವಿ ಕಾರ್ಯಾಚರಣೆ

ಕುಮಟಾ: ಆಹಾರ ಅರಸಿ ಬಂದಿದ್ದ ಕಾಡುಹಂದಿಯೊoದು ಆಯತಪ್ಪಿ ಬಾವಿಗೆ ಬಿದ್ದು ಏಳೆಂಟು ಗಂಟೆಗಳ ಕಾಲ ಒದ್ದಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಕೊನೆಗೆ ಅರಣ್ಯ ಅಧಿಕಾರಿಗಳ ನೆರವಿಂದ ಮೇಲೆಕ್ಕೆತ್ತಲಾಗಿದ್ದು, ಕಡಿಗೆ ಮರಳಿ ಬಿಡಲಾಗಿದೆ.

ಬಲೀಂದ್ರ ಹರಿಕಂತ್ರ ಎನ್ನುವವರ ಮನೆಯಲ್ಲಿ ರಾತ್ರಿ 20 ಅಡಿ ತೆರೆದ ಬಾವಿಯಲ್ಲಿ ಆಯತಪ್ಪಿ ಹಂದಿ ಬಿದ್ದಿತ್ತು. ಬಾವಿಯಲ್ಲಿ ನೀರು ಇದ್ದು, ಜೀವ ಉಳಿಸಿಕೊಳ್ಳಲು ರಾತ್ರಿಯಿಡಿ ಒದ್ದಾಡಿದೆ. ಮನೆಯವರು ಬೆಳಗ್ಗೆ ಹಂದಿ ಬಾವಿಯೊಳಗೆ ಬಿದ್ದಿರುವುದನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ನಾಯ್ಕ, ಉರಗ ತಜ್ಞ ಪವನ ನಾಯ್ಕ, ಸುರೇಶ ನಾಯ್ಕ, ಬಿರಾ ಗೌಡ, ಹೂವಣ್ಣ ಗೌಡ, ಅರಣ್ಯ ರಕ್ಷಕ ಪ್ರಮೋದ್ ಪಟಗಾರ, ಗಜಾನನ ಗೌಡ ಮುಂತಾದವರು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿದ್ದು, ಹಂದಿಯನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button