Big NewsImportant
Trending

ಅಬ್ಬಾ! 5 ಫೀಟ್ ಉದ್ದದ ಬಾಳೆಗೋನೆ; 43 ಕೆ.ಜಿ ತೂಕ

ಕುತೂಹಲಕ್ಕೆ ಕಾರಣವಾದ ಬೃಹತ್ ಬಾಳೆಗೋನೆ

ಹೊನ್ನಾವರ: ಸಾಮಾನ್ಯವಾಗಿ ಬಾಳೆಗೊನೆ ಎರಡ್ಮೂರು ಫೀಟ್ ಉದ್ದ ಇರುತ್ತೆ. ಆದ್ರೆ, ಇಲ್ಲೊಂದು ಬಾಳೆಗೋನೆ 5 ಫೀಟ್ ಉದ್ದ ಇದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಷ್ಟೆ ಅಲ್ಲ, ಈ ಬಾಳೆಗೋನೆ 43 ಕೆ.ಜಿ ತೂಕವನ್ನು ಹೊಂದಿದೆ ಅಂದರೆ ನೀವು ನಂಬ್ಲೆ ಬೇಕು.

ರಸ್ತೆಯಲ್ಲಿ ಸಿಕ್ಕಿತ್ತು ಹಣತುಂಬಿದ ಪರ್ಸ್: ಮರಳಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ಹೌದು, ತಾಲೂಕಿನ ಹಿರೇಬೈಲ್ ಗ್ರಾಮದ ಪ್ರಗತಿಪರ ಕೃಷಿಕ ಹಾಗು ಪಂಚಾಯತ್ ಸದಸ್ಯ, ವಿ.ಡಿ ನಾಯ್ಕ ಅವರ ಮನೆಯ ತೋಟದಲ್ಲಿ 5 ಫೀಟ್ ಉದ್ದದ ಬಾಳೆಗೋನೆ ಬೆಳೆದಿದೆ. ಕೆವಂಡಿಸ್ ಜಾತಿಗೆ ಸೇರಿದ್ದು, 5 ಫೀಟ್ ಉದ್ದದ ಈ ಬಾಳೆಗೋನೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button