Focus News
Trending

Madhu Bangarappa: ಹೊಸ ಶಾಸಕರನ್ನು ಸೇರಿಸಿಕೊಳ್ಳುವಷ್ಟು ನಮ್ಮ ಹೊಟ್ಟೆ ದೊಡ್ಡದಿದೆ: ಮಧು ಬಂಗಾರಪ್ಪ

ಶಿರಸಿ: ಶಾಸಕರ ಸಂಖ್ಯಾ ಬಲದ ದೃಷ್ಟಿಯಿಂದ ನಮಗೆ ಹೊಟ್ಟೆ ತುಂಬಿದೆ. ಆದರೆ, ಹೊಸ ಶಾಸಕರನ್ನು ಸೇರಿಸಿಕೊಳ್ಳುವಷ್ಟು ನಮ್ಮ ಹೊಟ್ಟೆ ದೊಡ್ಡದಿದೆ. ಕಾಂಗ್ರೆಸ್ ಗೆ ಶಾಸಕರ ಸೇರ್ಪಡೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ( Madhu Bangarappa) ಹೇಳಿದರು. ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ತಂದೆ ಎಸ್ ಬಂಗಾರಪ್ಪನವರೂ ಸಹ ಹಲವು ಬಾರಿ ಪಕ್ಷ ಬದಲಿಸಿದ್ದರು. ಶಾಸಕರು ಪಕ್ಷಕ್ಕೆ ಬಂದರೆ ವಾತಾವರಣ ಕಲ್ಮಷ ಆಗಲ್ಲ. ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಅಸಮಾಧಾನ ಸಹಜ. ಶಿವರಾಮ ಹೆಬ್ಬಾರ್ ಸೇರ್ಪಡೆಗೆ ಭೀಮಣ್ಣ ಸಹ ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ರಾಷ್ಟ್ರೀಯ ನಾಯಕರೇ ಅವರೇ ಪೋನ್ ಮಾಡಿ ತಿಳಿಸಿ ಹೇಳಿದ್ದಾರೆ. ರಾಜಕಾರಣದಲ್ಲಿ ಇವೆಲ್ಲ ಸಹಜ ಎಂದರು.

ಚುನಾವಣೆ ವೇಳೆ ನಾವು ನೀಡಿದ್ದ ಗ್ಯಾರಂಟಿ ನಾವು ಈಡೇರಿಸಿದ್ದೇವೆ. ಸೋತವರು ಟೀಕೆ ಟಿಪ್ಪಣಿ ಮಾಡ್ತಾರೆ. ಟೀಕೆ ಮಾಡುವ ಬದಲು ಬಡವರ ಪ್ರಗತಿಗಾಗಿ ಸಹಕಾರ ಮಾಡುವುದು ಉತ್ತಮ. ಪ್ರನಾಳಿಕೆ ಸದಸ್ಯನಾಗಿ ನಮಗೆ ಬಡವರ ಜೀವನದಲ್ಲಿ ಭಾಗಿ ಆಗುತ್ತಿರುವುದಕ್ಕೆ ಸಂತಸ ಆಗುತ್ತಿದೆ. ಕೊಟ್ಟ ಮಾತು ಉಳಿಸುವ ಕಾರ್ಯ ಮಾಡಿದ್ದೇವೆ ಎಂದರು. ಶಿಕ್ಷಣ ಇಲಾಖೆ ಪ್ರಮುಖ ಇಲಾಖೆಯಾದ್ದರಿಂದ ಇಲ್ಲಿ ಸಮಸ್ಯೆಗಳು ಜಾಸ್ತಿ ಇವೆ. ಮೊದಲು ಅರ್ಥ ಮಾಡಿಕೊಂಡು ಬಗೆಹರಿಸುತ್ತೇನೆ ಎಂದರು. ಶಾಸಕ ಭೀಮಣ್ಣ ನಾಯ್ಕ, ಅಬ್ಬಾಸ್ ತೋನ್ಸೆ, ಜಗದೀಶ ಗೌಡ ಇತರರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button