Important
Trending

ಶಾಲೆಯ ಬಾವಿಗೆ ಹಾರಿ ಸಾವಿಗೆ ಶರಣಾದ ವಿದ್ಯಾರ್ಥಿ: ಹೆಚ್ಚುತ್ತಿದೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ

ಶಿರಸಿ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಚಿಕ್ಕಚಿಕ್ಕ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ವಿದ್ಯಾರ್ಥಿಗಳು ಶರಣಾಗುತ್ತಿದ್ದಾರೆ. ಹೌದು, ಇದೀಗ ಇಂತಹದೇ ಪ್ರಕರಣ ಶಿರಸಿಯಲ್ಲಿ ನಡೆದಿದೆ. ಶಾಲೆಯ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪ್ರೊಗ್ರೆಸ್ಸಿವ್ ಪ್ರೌಢಶಾಲೆಯಲ್ಲಿ ನಡೆದಿದೆ.

19,900 ರೂಪಾಯಿ ಆರಂಭಿಕ ವೇತನ: SSLC ಪಾಸಾಗಿದ್ದವರು ಅರ್ಜಿ ಸಲ್ಲಿಸಬಹುದು: ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ

ಸಾಗರ ಮೂಲದ 9 ನೇ ತರಗತಿ ವಿದ್ಯಾರ್ಥಿ ಆಯನ್ ಬಾಬು ಶೇಖ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮನೆಯಲ್ಲಿ ಪೋಷಕರು ಬಯ್ದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಕಾಡುತ್ತಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳೀಯ ಜನರ ಸಹಾಯದಿಂದ ಬಾವಿಯಿಂದ ಶವವನ್ನು ಮೇಲೆತ್ತಿದ್ದು, ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button