Follow Us On

WhatsApp Group
Important
Trending

ಬೆಡ್ ರೂಮಿನ ಬಾಗಿಲು ಮುರಿದು ಮನೆಗಳ್ಳತನ : ಲಕ್ಷಾಂತರ ರೂ. ಮೌಲ್ಯದ ಆಭರಣ ಕಳ್ಳತನ

  • ಮನನೊಂದು ವ್ಯಕ್ತಿ ಆತ್ಮಹತ್ಯೆ
  • ಅನಾಥವಾದ ಮೂರು ಬಡ ಮಕ್ಕಳಿಗೆ ಬೇಕಿದೆ ಮಾನವೀಯ ನೆರವು

ಅಂಕೋಲಾ : ತಾಲೂಕಿನ ಮಂಜಗುಣಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಾಸಗೋಡ-ಕೋಗ್ರೆಯ ಮನೆಯೊಂದರಲ್ಲಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದ್ದು, ರವಿವಾರ ಪ್ರಕರಣ ದಾಖಲಾಗಿದೆ. ಕಳೆದ ಕೆಲ ದಿನಗಳಿಂದ ಹಲವೆಡೆ ನಾನಾ ರೀತಿಯ ಕಳ್ಳತನ ಪ್ರಕರಣಗಳು ವರದಿಯಾಗುತ್ತಿರು ವುದು ನಾಗರಿಕರ ನೆಮ್ಮದಿ ಕೆಡಿಸುತ್ತಿದೆ ಮತ್ತು ಪ್ರಕರಣಗಳು ಬೇಧಿಸುವುದು ಇಲಾಖೆಗೆ ಸವಾಲಿನ ಕೆಲಸ ವಾಗಿದೆ.

ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನ ಜಾವದ ಅವಧಿಯೊಳಗೆ ಈ ಕಳ್ಳತನ ನಡೆದಿರುವ ಸಾಧ್ಯತೆ ಇದ್ದು, ಈ ವೇಳೆ ಮನೆ ಮಾಲಿಕ ಮತ್ತು ಕುಟುಂಬಸ್ಥರು ಕಳ್ಳತನವಾದ ತಮ್ಮ ಹೊಸ ಮನೆಯಲ್ಲಿ ವಾಸವಿ ರದೆ ಹತ್ತಿರವೇ ಇದ್ದ ಹಳೆಯ ಮನೆಯಲ್ಲಿ ಮಲಗಿದ್ದರು ಎನ್ನಲಾಗಿದೆ.

ಮನೆಯ ಮುಂಬಂದಿಯ ಕಬ್ಬಿಣದ ಗ್ರಿಲ್‍ನ ಚಾವಿ ಒಡೆದಿದ್ದಲ್ಲದೇ, ಮುಂಬಾಗಿಲ ಬೀಗ ಮುರಿದು ಒಳ ಹೊಕ್ಕ ಕಳ್ಳರು, ಬೆಡ್‍ರೂಮ್‍ನ ಬಾಗಿಲು ಮುರಿದು ಒಳಗಡೆಯಿದ್ದ ಕಪಾಟು ಮೀಟಿ ಅದರಲ್ಲಿದ್ದ ನೆಕ್ಲೆಸ್, ಚೈನ್, ಉಂಗುರಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಕರೆಯಿಸಿ ಮಾಹಿತಿ ಕಲೆ ಹಾಕಲಾಗಿದೆ.

ಮೂವರು ಮಕ್ಕಳು ಅನಾಥ

ಆತ್ಮಹತ್ಯೆ ಪ್ರಕರಣ : ಕೇಣಿಯ ಮೂಲೆ ಭಾಗದ 51 ರ ಪುರಷನೊರ್ವ ಮೀನುಗಾರಿಕಾ ಶೆಡ್‍ಬಳಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರಕರಣ ದಾಖಲಾಗಿದೆ. ಆತನ ಪತ್ನಿಯೂ ಕಳೆದ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಳು. ಮೃತ ದುರ್ದೈವಿಯು ತನ್ನ ಮೂರು ಮಕ್ಕ ಳನ್ನು ಸಲಹುತ್ತ ಕಷ್ಟದ ಜೀವನ ನಡೆಸುತ್ತಿದ್ದ ಎನ್ನಲಾಗಿದ್ದು, ತಂದೆ-ತಾಯಿಗಳಿಲ್ಲದ ಬಡ ಕುಟುಂಬದ ಮಕ್ಕಳಿಗೆ ಮಾನವೀಯ ನೆರವು ಮತ್ತು ಅನುಕಂಪ ದೊರೆಯಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button