19,900 ರೂಪಾಯಿ ಆರಂಭಿಕ ವೇತನ: SSLC ಪಾಸಾಗಿದ್ದವರು ಅರ್ಜಿ ಸಲ್ಲಿಸಬಹುದು: ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ

ಕಾರವಾರ: ಉದ್ಯೋಗ ಹುಡುಕುತ್ತಿರುವವರಿಗೆ ಒಂದು ಶುಭಸುದ್ದಿ. ಭಾರತೀಯ ಅಂಚೆ ಇಲಾಖೆಯಿಂದ ಅಂಚೆ ಇಲಾಖೆಯ ಬೆಂಗಳೂರು ಸರ್ಕಲ್ ವ್ಯಾಪ್ತಿಯಲ್ಲಿ ಮೋಟಾರ್ ಮೇಲ್ ಸೇವೆಯ ಅಡಿಯಲ್ಲಿ ಡ್ರೈವರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್‌ಸೈಟ್ www.indiapost.gov.in ಗೆ ಭೇಟಿ ನೀಡುವ ಮೂಲಕ 18 ವರ್ಷದಿಂದ 27 ವರ್ಷದೊಳಗಿನ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

SSLC ಹುಡುಗರಿಂದ ಮೊಬೈಲ್ ಕಳ್ಳತನ: ಖರೀದಿ ನೆಪದಲ್ಲಿ ತೆರಳಿ ಮಾಲೀಕನ ಕಣ್ಣುತಪ್ಪಿಸಿ ಕಳ್ಳತನ

ಒಟ್ಟು 19 ಹುದ್ದೆಗಳು ಖಾಲಿಯಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26, 2022 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 19,900 ರೂ. ವೇತನವಾಗಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ವಾಹನ ಚಾಲನಾ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದ್ದು, ಇದರಲ್ಲಿ ತೇರ್ಗಡೆ ಹೊಂದಿ ಅಭ್ಯರ್ಥಿಗಳನ್ನು ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಈ ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಸುವಂತೆ ಕೋರಲಾಗಿದೆ. The Manager, Mail Motor Service, Bengaluru- 560001

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Exit mobile version