Focus News
Trending

Ganesh Utsav: ಅದ್ಧೂರಿ ಮೆರವಣಿಗೆ: ಸಿಡಿಮದ್ದು ಪ್ರದರ್ಶನ: ಅಪಾರ ಭಕ್ತರ ಸಮ್ಮುಖದಲ್ಲಿ ಮಂಗಲಮೂರ್ತಿಯ ವಿಸರ್ಜನೆ

ಹೊನ್ನಾವರ: ಪಟ್ಟಣದ ವಿವಿಧಡೆ ಗಣೆಶೋತ್ಸವ ವಿಜೃಂಬಣೆಯಿoದ ಆಚರಿಸುತ್ತಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಲಾಗುತ್ತಿದೆ. ಪಟ್ಟಣ ವ್ಯಾಪ್ತಿಯ ಕರ್ಕಿನಾಕ, ಉದ್ಯಮನಗರ, ದುರ್ಗಾಕೇರಿ, ತುಳಸಿನಗರ, ಬಂದರ ರಸ್ತೆ, ಶೆಟ್ಟಿಕೆರೆ, ಮಾಸ್ತಿಕಟ್ಟೆ, ಕೆಳಗಿನಪಾಳ್ಯ, ಕೆ.ಬಿ.ಇ, ಕೆ.ಎಚ್.ಬಿ ಕಾಲೋನಿ, ಗಾಂಧಿನಗರ, ಪೊಲೀಸ್ ಠಾಣಿ, ರಾಯಲಕೇರಿ, ಅರಣ್ಯ ಇಲಾಖೆ, ವಿಶ್ವಹಿಂದುಪರಿಷತ್, ನ್ಯೂ ಇಂಗ್ಲೀಷ್ ಸ್ಕೂಲ ಪ್ರತಿಷ್ಠಾಪನೆಗೊಂಡ ಗಣೇಶಮೂರ್ತಿಯ ಸುತ್ತಲೂ ವಿವಿಧ ಅಲಂಕಾರ ಮಾಡಿ ತಳಿರು ತೋರಣದಿಂದ ಸಿಂಗಾರ ಮಾಡಲಾಗಿದೆ.

ಈ ಎಲ್ಲಾ ಗಣೇಶೋತ್ಸವ ಸಮಿತಿಗಳಲ್ಲಿ ಸತ್ಯಗಣಪತಿ ವೃತ, ಗಣಹೋಮ, ದಂಡಾವಳಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲದೇ ಭಜನೆ, ಯಕ್ಷಗಾನ, ರಸಮಂಜರಿ ಕಾರ್ಯಕ್ರಮ, ನಾಟಕದಂತಹ ಹಲವು ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನ್ಯೂ ಇಂಗ್ಲೀಷ್ ಸ್ಕೂಲ್ ವಿದ್ಯಾರ್ಥಿಗಳು ಆಕರ್ಷಕ ರಂಗೋಲಿ ಹಾಗು ವಿದ್ಯಾರ್ಥಿಗಳು ಬಿಡಿಸಿದ ಗಣಪತಿಯ ವಿವಿಧ ಭಂಗಿಯ ಭಾವಚಿತ್ರ ಎಲ್ಲರನ್ನು ಅಕರ್ಷಿಸುತ್ತಿದೆ.

ಇನ್ನು ವಿಶ್ವಹಿಂದು ಪರಿಷತ್ ಗಣಪತಿಯು ಈ ವರ್ಷವು 55 ನೇ ವರ್ಷದ ಆಚರಣೆಯಾಗಿದ್ದು, 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಮಿತಿಯ ವಿಶ್ವನಾಥ ನಾಯಕ ಮಾತನಾಡಿ, 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದೇವೆ. ಸೆಪ್ಟೆಂಬರ್24 ರಂದು ಗಣಹೋಮ, 25ರಂದು ಸತ್ಯನಾರಾಯಣ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ, 26 ದಂಡಾವಳಿ ಪೂಜೆ, 27 ರಂದು ಮಧ್ಯಾಹ್ನ 3:30 ಕ್ಕೆ ವಿಸರ್ಜನಾ ಮೆರವಣೆಗೆ ನಡೆಯಲಿದೆ. ತಾಲೂಕಿನ ಗಣೇಶೊತ್ಸವ ಸಮಿತಿಗೆ ಮಾತೃಸ್ವರೂಪಿಯಾಗಿರುವ ವಿಶ್ವಹಿಂದುಪರಿಷತ್ ಗಣಪತಿ ವಿಸರ್ಜನಾ ಕಾರ್ಯಕ್ಕೆ ಎಲ್ಲಾ ಸಮಿತಿಯವರು ಹಾಗೂ ಎಲ್ಲಾ ಸಮಾಜದವರನ್ನು ಆಹ್ವಾನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ತಾಲೂಕಿನ ಬಳಕೂರ ರಥಬೀದಿಯ 13 ನೇ ವರ್ಷದ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿoದ ಮೂರು ದಿಗಳಕಾಲ ನಡೆಯಿತು. ಬಾದ್ರಪದ ಶುಕ್ಲ ಚತುರ್ಥಿ ಮಂಗಳವಾರ ಗಣಪತಿಯನ್ನು ತಂದು ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣಹೋಮ, ಸಾಮೂಹಿಕ ಸತ್ಯ ಗಣಪತಿ ವೃತ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಭಜನಾ ಕಾರ್ಯಕ್ರಮ ದೇವರಸನ್ನಿಧಿಯಲ್ಲಿ ನಡೆದವು,

ಗುರುವಾರ ಮಹಾಪೂಜೆ, ಪ್ರಸಾದ ವಿತರಣೆ, ಫಲಾವಳಿ ಸವಾಲು ನಡೆದು, ಮೆರವಣಿಗೆಯ ಮೂಲಕ ಮಂಗಲಮೂರ್ತಿ ವಿಸರ್ಜನೆ ನಡೆಯಿತು, ರಥಬೀದಿಯಿಂದ ಹೊರಟ ವಿಸರ್ಜನಾ ಮೆರವಣಿಗೆ, ರಸ್ತೆಯಲ್ಲಿ ಸಂಚರಿಸಿತು. ರಸ್ತೆಯ ಅಕ್ಕ-ಪಕ್ಕದಲ್ಲಿ ನಿಂತು ಮೆರವಣಿಗೆಯನ್ನು ಗ್ರಾಮಸ್ಥರು ಕಣ್ಣತುಂಬಿಕೊoಡರು. ನೂರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಿಡಿಮದ್ದು ಪ್ರದರ್ಶನದ ಮೂಲಕ ಮಂಗಲಮೂರ್ತಿಯನ್ನು ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ಸಮೀತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮಸ್ಥರು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button