SSLC ಹುಡುಗರಿಂದ ಮೊಬೈಲ್ ಕಳ್ಳತನ: ಖರೀದಿ ನೆಪದಲ್ಲಿ ತೆರಳಿ ಮಾಲೀಕನ ಕಣ್ಣುತಪ್ಪಿಸಿ ಕಳ್ಳತನ

ರಿಮಾಂಡ್ ಹೋಮ್ ಸೇರಿದ ಬಾಲಾಪರಾಧಿಗಳು

ಹೊನ್ನಾವರ: ಮೊಬೈಲ್ ಅಂಗಡಿಗೆ ಬಂದಿದ್ದ ಇಬ್ಬರು ಹುಡುಗರು ಮೊಬೈಲ್ ಕವರ್ ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿ ಮಾಲೀಕನನ್ನು ಯಾಮಾರಿಸಿ, ಎರಡು ಮೊಬೈಲ್ ಕದ್ದ ಘಟನೆ ಇಲ್ಲಿನ Busstand ಹತ್ತಿರ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ರಸ್ತೆಯಲ್ಲಿ ನಡೆದಿತ್ತು. ಅಂಗಡಿ ಮಾಲೀಕ ಮೊಬೈಲ್ ಕವರ್ ತೋರಿಸಲು ಹೋದಾಗ ಮಾಲೀಕರಿಗೆ ಗೊತ್ತಾಗದ ರೀತಿಯಲ್ಲಿ ಅಂಗಡಿಯಲ್ಲಿದ್ದ ಎರಡು ಮೊಬೈಲ್ ಕಳುವು ಮಾಡಿಕೊಂಡು ತೆರಳಿದ್ದರು.

ಭಟ್ಕಳದ ವಿವಿಧೆಡೆ 10 ಪೊಲೀಸ್ ತಂಡಗಳಿoದ ಶೋಧ ಕಾರ್ಯ; ಇಬ್ಬರ ಬಂಧನ

ಕಳವು ಮಾಡಿಕೊಂಡು ಹೋಗಿರುವ ಇಬ್ಬರನ್ನು ಪತ್ತೆ ಮಾಡಿ ಅವರ ಕಡೆಯಿಂದ ಮೊಬೈಲ್ ಫೋನ್ ಮತ್ತು ಜಿಯೊ ಡೊಂಗಲ್ ವಸೂಲಿ ಮಾಡಿ ಕೊಡುವಂತೆ ಮೊಬೈಲ್ ಅಂಗಡಿ ಮಾಲೀಕ ಹಾಡಗೇರಿ ಮುಟ್ಟಾದ ಯೊಗೇಶ ಈಶ್ವರ ಸಣ್ಣನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸಿಕ್ಕಿಬಿದ್ದ ವಿದ್ಯಾರ್ಥಿಗಳು:

ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿಗಳು ಕುಮಟಾದವರಾಗಿದ್ದು, ಈಗಷ್ಟೇ ಎಸ್. ಎಸ್. ಎಲ್. ಸಿ ಓದುತ್ತಿರುವ ಬಾಲಕರು ಎಂದು ತಿಳಿದು ಬಂದಿದೆ. ಇದೀಗ ವಿದ್ಯಾರ್ಥಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇವರು ಕಳೆದ ರವಿವಾರ ಅಂಕೋಲದಲ್ಲಿಯೂ ಮೊಬೈಲ್ ಕಳ್ಳತನ ಮಾಡಿದ್ದರು ಎನ್ನಲಾಗಿದೆ.

ಚಿಕ್ಕಪ್ಪನ ಬೈಕ್ ತೆಗೆದುಕೊಂಡು ಅದರಲ್ಲಿ ಪ್ರಯಾಣ ಮಾಡಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ತಮ್ಮ ತಾಲೂಕು ಬಿಟ್ಟು ಅಕ್ಕಪಕ್ಕದ ತಾಲೂಕನ್ನೆ ಈ ಬಾಲಪರಾಧಿಗಳು ಆಯ್ಕೆಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ವ್ಯಾಪಾರದ ನೆಪದಲ್ಲಿ ಹೋಗಿ ಅಂಗಡಿಯವರ ಕಣ್ಣುತಪ್ಪಿಸಿ ಮೊಬೈಲ್ ಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಇದೀಗ ಇವರ ಕೃತ್ಯ ಬಯಲಾಗಿದ್ದು, ಬಾಲಪರಾಧಿಗಳನ್ನು ರಿಮಾಂಡ್ ಹೋಮ್ ಗೆ ಕಳುಹಿಸಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version