Focus News
Trending

ಉಮೇಶ ಕತ್ತಿ ನಿಧನಕ್ಕೆ ಆರ್.ವಿ. ದೇಶಪಾಂಡೆ ಸಂತಾಪ

ಕಾರವಾರ: ಸಚಿವ ಉಮೇಶ ಕತ್ತಿ ನಿಧನಕ್ಕೆ ಮಾಜಿ ಸಚಿವ, ಶಾಸಕ ಆರ್ ವಿ ದೇಶಪಾಂಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಉಮೇಶ ನನ್ನ ಆತ್ಮೀಯ ಸ್ನೇಹಿತ. ಏಳು ಭಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು, ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. ಸಹಕಾರಿ ಸಂಘಗಳನ್ನು ಸ್ಥಾಪನೆ ಮಾಡಿದ್ದ ಅವರಿಗೆ ಬಡವರ ಬಗ್ಗೆ ಕಾಳಜಿ ಇತ್ತು. ಅಜಾತಶತ್ರುವಂತಿದ್ದ ಉಮೇಶ ಕತ್ತಿ ನಿಧನವಾಗಿರುವುದು ಬೇಸರ ತಂದಿದೆ.

ಗದ್ದೆಗೆ ತೆರಳಿದ್ದಾಗ ದಿಡೀರ್ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಹಿನ್ನಲೆ ಗಾಯಕ

ನಾನು ಯಾವಾಗಲೇ ಕಾಲ್ ಮಾಡಿದರು ಕೂಡ ತಕ್ಷಣ ಪ್ರತಿಕ್ರೀಯಿಸುತ್ತಿದ್ದರು. ಅವರ ಸಾವು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಅವರ ಸಾವಿನ ದುಃಖ ಸಹಿಸುವ  ಶಕ್ತಿ  ಕುಟುಂಬದವರಿಗೆ  ನೀಡಲಿ ಎಂದು ಗೋಕರ್ಣದಲ್ಲಿ ಶಾಸಕ ಆರ್ ವಿ ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button