Focus News
Trending

ಕರಾವಳಿ ಕಾವಲು ಪಡೆ ಠಾಣೆಗಳಿಗೆ ನಿರೀಕ್ಷಕರ ನಿಯುಕ್ತಿ, ಹೊನ್ನಾವರ ಹಾಗೂ ಬೆಲೇಕೇರಿ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಹೆಚ್ಚಿದ ಜವಾಬ್ದಾರಿ?

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಹೊನ್ನಾವರ ತಾಲೂಕುಗಳ ಕರಾವಳಿ ಕಾವಲು ಪಡೆ ಠಾಣೆಗಳಿಗೆ ನಿರೀಕ್ಷಕರನ್ನು ನಿಯುಕ್ತಗೊಳಿಸಿ ಕರಾವಳಿ ಕಾವಲು ಪಡೆಯ ವರಿಷ್ಠರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೇಕೇರಿ ಠಾಣೆಗೆ ಮಂಜುನಾಥ ಇ.ಓ ಅವರನ್ನು ನಿಯುಕ್ತಗೊಳಿಸಲಾಗಿದೆ. ಈ ಹಿಂದೆ ಇದೇ ಠಾಣೆಯ ಪಿಎಸ್ಐ ಪ್ರಿಯಾಂಕಾ ಎಂ,ಪ್ರಭಾರಿ ಹುದ್ದೆ ನಿರ್ವಹಿಸುತ್ತಿದ್ದರು.

ಅಂತೆಯೇ ಈ ಹಿಂದೆ ಜಿಲ್ಲೆಯ ಕುಮಟಾ, ಕಾರವಾರದ ಚಿತ್ತಾಕುಲ, ಅಂಕೋಲಾ ಸೇರಿದಂತೆ ಜಿಲ್ಲೆಯ ಇತರೆಡೆಯೂ ಜನಾನುರಾಗಿ ಸೇವೆ ಸಲ್ಲಿಸಿ, ಪಿ.ಎಸ್. ಐ ಸಿವಿಲ್ ಹುದ್ದೆಯಿಂದ ಪದೋನ್ನತಿ ಹೊಂದಿದ್ದ ಸಂಪತ್ ಇ.ಸಿ ಅವರನ್ನು ಕರಾವಳಿ ಕಾವಲು ಪಡೆ ಹೊನ್ನಾವರ ಠಾಣೆಗೆ ನಿಯುಕ್ತಿ ಮಾಡಲಾಗಿದ್ದು ಕೂಡಲೇ ಪೂರ್ಣ ಪ್ರಮಾಣದ ಪ್ರಭಾರವನ್ನು ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತಿತರಡೆ ಬಿಗು ಕ್ರಮಗಳು ಮುಂದುವರೆದಿದ್ದು,ಕೆಲ ಅಕ್ರಮ ದಂಧೆ ಕೋರರು ಜಲಮಾರ್ಗ ಬಳಸುವ ಸಾಧ್ಯತೆ ಇರುವುದರಿಂದ, ಅಕ್ರಮಕ್ಕೆ ಅವಕಾಶವಿಲ್ಲದಂತೆ ಕಡಲಿನಲ್ಲಿಯೂ ಹೆಚ್ಚಿನ ಕಣ್ಗಾವಲು ಅವಶ್ಯವಿದ್ದು,,ಸಂಬಂಧಿಸಿದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕರ್ತವ್ಯ ಮತ್ತು ಜವಾಬ್ದಾರಿಯೂ ಹೆಚ್ಚುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button