Important
Trending

ಪಾನಮತ್ತನಾದ ಲಾರಿ ಚಾಲಕನ ಅವಾಂತರ : ವ್ಯಕ್ತಿಗೆ ಅಪಘಾತ ಪಡಿಸಿ, ಸ್ಥಳದಲ್ಲಿ ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನ

ಕುಮಟಾ: ಪಾನ ಮತ್ತನಾದ ಲಾರಿ ಚಾಲಕನೋರ್ವ ಏಕಾಏಕಿ ಹೆಗಡೆ ಕ್ರಾಸ್ ಬಳಿ ವ್ಯಕ್ತಿಯೋರ್ವರಿಗೆ ಅಪಘಾತ ಪಡಿಸಿ, ಸ್ಥಳದಲ್ಲಿ ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ವಾಹನವನ್ನು ಓವರ್ ಟೇಕ್ ಮಾಡಿ ಕುಮಟಾದ ಡಿಪೋ ಕ್ರಾಸ್ ಸಮೀಪ ಅಡ್ಡಗಟ್ಟಿ, ಲಾರಿ ಚಾಲಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ಮಹಾರಾಷ್ಟçದಿಂದ ಮಂಗಳೂರು ಮಾರ್ಗವಾಗಿ ಸಾಗುತ್ತಿದ್ದ ಸರಕು ತುಂಬಿದ ಲಾರಿಯ driver ಹೆಗಡೆ ಕ್ರಾಸ್ ಸಮೀಪ ಹೆದ್ದಾರಿ 66 ರಲ್ಲಿ ಬೈಕ್‌ನಲ್ಲಿ ಕುಮಟಾ ಕಡೆಗೆ ಸಾಗುತ್ತಿದ್ದ ದೀವಗಿಯ ಈಶ್ವರ ಕನ್ನ ಅಂಬಿಗ ಎನ್ನುವವರಿಗೆ ಅಪಘಾತ ಪಡಿಸಿ, ಸ್ಥಳದಲ್ಲಿ ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದ.

ಅದೃಷ್ಠವಶಾತ್ ಬೈಕ್ ಸವಾರನಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತವನ್ನು ಗಮನಿಸಿದ ಸಾರ್ವಜನಿಕರು ಕುಮಟಾ ಡಿ.ಪೋ ಕ್ರಾಸ್ ಸಮೀಪ ಲಾರಿಯನ್ನು ಅಡ್ಡಗಟ್ಟಿ, ಡ್ರೆöÊವರ್ ನನ್ನು ವಿಚಾರಿಸಿದ್ದು, ಈ ವೇಳೆ ಚಾಲಕ ಅತಿಯಾಗಿ ಮದ್ಯ ಪಾನ ಮಾಡಿರುವುದು ಕಂಡುಬoದಿದೆ. ಕಾರಣ ಕುಮಟಾ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು, ಕರೆಗೆ ಸ್ಪಂಧಿಸಿ ಶೀಘ್ರವೇ ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button