Focus NewsImportant
Trending

ಈಜಲು ಹೋದ ಎರಡು ಟಿಬೇಟ್ ಕ್ಯಾಂಪಿನ ಬೌದ್ಧ ಬಿಕ್ಕುಗಳು ನೀರಿನಲ್ಲಿ ಮುಳುಗಿ ಸಾವು

ಮುಂಡಗೋಡ: ಈಜಲು ಹೋದ ಎರಡು ಟಿಬೇಟ್ ಕ್ಯಾಂಪಿನ ಬೌದ್ಧ ಬಿಕ್ಕುಗಳು ಮೃತಪಟ್ಟ ಘಟನೆತಾಲೂಕಿನ ಬಾಚಣಿಕೆ ಜಲಾಶಯದಲ್ಲಿ ನಡೆದಿದೆ. 6 ಜನರು ಸ್ನೇಹಿತ ಬೌದ್ಧ ಬಿಕ್ಕುಗಳು ಬೆಳಿಗ್ಗೆ ಕ್ಯಾಂಪ್ ನಂಬರ್ 2 ದಿಂದ ಹೊರಟು ಬಾಚಣಕಿ ಜಲಾಶಯಕ್ಕೆ ಆಗಮಿಸಿದ್ದರು. ಈಜು ಬರದಿದ್ದರೂ ಜಲಾಶಯಕ್ಕೆ ಇಳಿದು ಈಜಲು ಹೋಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಿಷಯ ತಿಳಿದ ಪೊಲೀಸರು , ಸ್ಥಳೀಯರು ಶವ ಹೊರತೆಗೆಯುವ ಕಾರ್ಯ ಮಾಡಿದರು. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್,ಯಲ್ಲಾಪುರ

Back to top button