Important
Trending

ಚಾಲಕನ ನಿಯಂತ್ರಣ ತಪ್ಪಿ ಚರಂಡಿ ಕಾಮಗಾರಿಗೆ ತೆಗೆಯಲಾಗಿದ್ದ ಹೊಂಡದಲ್ಲಿ ಬಿದ್ದ ಕಾರು

ಕಾರವಾರ: ಕಾರೊಂದು ರಸ್ತೆಯಂಚಿನ ಕಾಲುವೆಗೆ ಬಿದ್ದು ಐವರು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಮಂಗಳೂರು ಮೂಲದ ರಾಕೇಶ್ ಕಿಣಿ ಎಂಬುವವರೇ ಅಪಘಾತಪಡಿಸಿದ ಕಾರು ಚಾಲಕನಾಗಿದ್ದು, ಕಾರಿನಲ್ಲಿದ್ದ ಅವರ ತಂದೆ ಅಮೃತ್ ಕಿಣಿ, ತಾಯಿ ಶಾಲಿನಿ ಕಿಣಿ, ಪತ್ನಿ ದೀಪಾ ಕಿಣಿ ಹಾಗೂ ಮಗಳು ರಿಧಿಮಾ ಕಿಣಿ (9 ತಿಂಗಳು) ಗಾಯಗೊಂಡಿದ್ದಾರೆ. ಕಾರು ಅಪಘಾತ ನಡೆದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಗಾಯಗೊಂಡಿದ್ದಾರೆ.

ವಿಳಾಸ ಕೇಳುವ ನೆಪಮಾಡಿಕೊಂಡು ಐದಾರುಕಡೆ ರಸ್ತೆಯಲ್ಲಿ ಹೋಗುತ್ತಿದ್ದವರ ದರೋಡೆ: ಒಬ್ಬಂಟಿ ವ್ಯಕ್ತಿ, ಬೈಕ್ ಸವಾರರೇ ಇವರ ಟಾರ್ಗೆಟ್

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮರೈನ್ ಬಯೋಲಜಿ ಕಾಲೇಜಿನ ಬಳಿ ಸರ್ವಿಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಚಾಲಕ ಅಂಕೋಲಾ ಮಾರ್ಗದಿಂದ ಸದಾಶಿವ ಗಡದತ್ತ ತೆರಳಲು ಮಧ್ಯಾಹ್ನದ ವೇಳೆಗೆ ಸರ್ವಿಸ್ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದು, ಹೆದ್ದಾರಿಯಲ್ಲಿ ಸಾಗುವ ವೇಳೆ ನಿಯಂತ್ರಣ ತಪ್ಪಿ ಚರಂಡಿ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಯಲ್ಲಿ ಕಾರು ಅಡ್ಡಲಾಗಿ ಬಿದ್ದಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button