Focus NewsImportant
Trending

ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ: ಸುಮಾರು 1 ಕೋಟಿ ಮೌಲ್ಯದ ಗೋವಾ ಮದ್ಯ ವಶಕ್ಕೆ

ಕಾರವಾರ: ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು, ಬರೋಬ್ಬರಿ 1 ಕೋಟಿ ಮೌಲ್ಯದ ಗೋವಾ, ಕರ್ನಾಟಕ ಮದ್ಯ ಜಪ್ತಿಪಡಿಸಿಕೊಂಡಿರುವ ಘಟನೆ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ. ಬಳಿಕ ಪರವಾನಗಿ ಇದ್ದ 1 ಕೋಟಿ 19 ಲಕ್ಷ ರೂಪಾಯಿ ಮೌಲ್ಯದ ಸಕ್ರಮ ಮದ್ಯಗಳನ್ನ ಜೋಡಿಸಿಕೊಂಡು ಬೆಂಗಳೂರಿಗೆ ಸಾಗಿಸಲು ಮುಂದಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ., ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಖುದ್ದು ತಾವೇ ಗೋವಾ- ಕರ್ನಾಟಕ ಗಡಿ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ತಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಯೊoದಿಗೆ ಪಹರೆ ಕಾಯುತ್ತಿದ್ದರು.

ಹೆದ್ದಾರಿ ದಾಟುತ್ತಿದ್ದ ವೇಳೆ ಡಿಕ್ಕಿಹೊಡೆದ ಬಸ್: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಈ ವೇಳೆ ಎಂದಿನoತೆ ವಾಹನಗಳ ತಪಾಸಣೆ ನಡೆಸುವಾಗ ಟ್ರಕ್ ಬಂದಿದ್ದು, ತಪಾಸಣೆ ನಡೆಸಿದಾಗ ಅಕ್ರಮ ಮದ್ಯಗಳಿರುವುದು ಪತ್ತೆಯಾಗಿದೆ. ಟ್ರಕ್ ಚಾಲಕ ನರಸಿಂಹರಾಜುವನ್ನ ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button