ಹೆದ್ದಾರಿ ದಾಟುತ್ತಿದ್ದ ವೇಳೆ ಡಿಕ್ಕಿಹೊಡೆದ ಬಸ್: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಭಟ್ಕಳ: ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೊಬ್ಬನಿಗೆ ಬಸ್ಸೊಂದ್ದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾವಿನಕಟ್ಟಾ ಕೋಕ್ತಿ ಕ್ರಾಸ್ ನಲ್ಲಿ ನಡೆದಿದೆ. ಮೃತ ಪಾದಚಾರಿ, ಹೊನ್ನಪ್ಪ ತಿಮ್ಮಯ್ಯ ನಾಯ್ಕ 66 ಎಂದು ತಿಳಿದು ಬಂದಿದೆ. ಈತ ಕೋಕ್ತಿ ಕ್ರಾಸ್ ನಿಂದ ಮಾವಿನಕಟ್ಟಾ ಮೀನು ಮಾರುಕಟ್ಟೆ ಕಡೆ ಹೋಗಲು ನಡೆದುಕೊಂಡು ರಸ್ತೆ ದಾಟುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

ವಿಳಾಸ ಕೇಳುವ ನೆಪಮಾಡಿಕೊಂಡು ಐದಾರುಕಡೆ ರಸ್ತೆಯಲ್ಲಿ ಹೋಗುತ್ತಿದ್ದವರ ದರೋಡೆ: ಒಬ್ಬಂಟಿ ವ್ಯಕ್ತಿ, ಬೈಕ್ ಸವಾರರೇ ಇವರ ಟಾರ್ಗೆಟ್

ಮುರುಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಬಸ್ ಹೆದ್ದಾರಿ ದಾಟುತ್ತಿದ್ದ ಹೊನ್ನಪ್ಪ ತಿಮ್ಮಯ್ಯ ನಾಯ್ಕ ಈತನಿಗೆ ಡಿಕ್ಕಿ ಹೊಡೆದು ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್,ಉದಯ್ ಎಸ್ ನಾಯ್ಕ, ಭಟ್ಕಳ

Exit mobile version