Focus News
Trending

ಕುಮಟಾದಲ್ಲಿ 24, ಹೊನ್ನಾವರದಲ್ಲಿ 11 ಕರೊನಾ ಕೇಸ್

ಕುಕುಮಟಾದಲ್ಲಿ ಮತ್ತೆ ಹೆಚ್ಚಿದ ಸೋಂಕಿತರ ಸಂಖ್ಯೆ
ಹೊನ್ನಾವರದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಕರಣ ದಾಖಲು

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಕರೊನಾ ಅಬ್ಬರ ತಗ್ಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬoದಿದೆ. ತಾಲೂಕಿನಲ್ಲಿ ಇಂದು ಒಟ್ಟು 24 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ಚಿತ್ರಗಿಯಲ್ಲಿ 9, ಹೆಗಡೆ ಮಚಗೋಣ 3, ಗುಂದ 2 ಸೇರಿದಂತೆ, ಹೆರವಟ್ಟಾ, ಹೊಸಹೆರವಟ್ಟಾ, ಮಾಸೂರ್, ಕೊಪ್ಪಳಕರವಾಡಿ, ಕಲ್ಲಬ್ಬೆ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಹೊಸಹೆರವಟ್ಟಾದ 36 ವರ್ಷದ ಪುರುಷ, ಗುನಗನಕೋಪ್ಪಾದ 60 ವರ್ಷದ 60 ವರ್ಷದ ಪುರುಷ, ಕಲ್ಲಬ್ಬೆಯ 57 ವರ್ಷದ ಪುರುಷ, ಕೆರೆಗದ್ದೆಯ 48 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಚಿತ್ರಗಿಯ 54 ವರ್ಷದ ಮಹಿಳೆ, 16 ವರ್ಷದ ಬಾಲಕ, 56 ವರ್ಷದ ಪುರುಷ, 62 ವರ್ಷದ ಪುರುಷ, 64 ವರ್ಷದ ಮಹಿಳೆ, 49 ವರ್ಷದ ಮಹಿಳೆ, 58 ವರ್ಷದ ಪುರುಷ, 20 ವರ್ಷದ ಯುವತಿ, 17 ವರ್ಷದ ಬಾಲಕಗೂ ಸೋಂಕು ದೃಢಪಟ್ಟಿದೆ.

ರಥಬೀದಿಯ 69 ವರ್ಷದ ವೃದ್ಧ, ಗುಂದದ 57 ವರ್ಷದ ಮಹಿಳೆ, 27 ವರ್ಷದ ಯುವತಿ, ತದಡಿಯ 60 ವರ್ಷದ ಪುರುಷ, ಹೊಲನಗದ್ದೆಯ 54 ವರ್ಷದ ಮಹಿಳೆ, ಹೆಗಡೆ ಮಚಗೋಣದ 24 ವಷದ ಯುವತಿ, 18 ವರ್ಷದ ಯುವಕ, 84 ವರ್ಷದ ವೃದ್ಧಗೆ ಸೋಂಕು ದೃಢಪಟ್ಟಿದೆ.

ಮಾಸೂರಿನ 41 ವರ್ಷದ ಪುರುಷ, ಹೆರವಟ್ಟಾದ 56 ವರ್ಷದ ಮಹಿಳೆ, ಕೋಪ್ಪಳಕರವಾಡಿಯ 66 ವರ್ಷದ ಮಹಿಳೆಯಲ್ಲಿ ಸೋಂಕು ದೃಡಪಟ್ಟಿದೆ. ಇಂದು 24 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1681 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ 11 ಕರೊನಾ ಕೇಸ್

ಹೊನ್ನಾವರ: ತಾಲೂಕಿನಲ್ಲಿ ಇಂದು 11 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇಂದು ವರದಿಯಾದ 11 ಪ್ರಕರಣಗಳಲ್ಲಿ ಗ್ರಾಮೀಣ ಭಾಗದಲ್ಲಿಯೆ ಅತಿಹೆಚ್ಚು ಅಂದರೆ 9 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.


ಹೊನ್ನಾವರ ಪಟ್ಟಣದ 49 ವರ್ಷದ ಪುರುಷ, ಕೆಳಗಿನಪಾಳ್ಯದ 43 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಗ್ರಾಮೀಣ ಭಾಗವಾದ ಮುಗ್ವಾದ 36 ವರ್ಷದ ಮಹಿಳೆ, 46 ವರ್ಷದ ಪುರುಷ, ಚಿಕ್ಕನಕೋಡದ 39 ವರ್ಷದ ಪುರುಷ, 35 ವರ್ಷದ ಪುರುಷ, ಗುಂಡಿಬೈಲದ 42 ವರ್ಷದ ಪುರುಷಗೆ ಸೋಂಕು ದೃಢಪಟ್ಟಿದೆ.

ಮರಬಳ್ಳಿಯ 20 ವರ್ಷದ ಯುವತಿ, ಕವಲಕ್ಕಿಯ 44 ವರ್ಷದ ಪುರುಷ, ಮಾವಿನಕುರ್ವಾದ 25 ವರ್ಷದ ಯುವಕ, ನವಿಲಗೋಣದ 60 ವರ್ಷದ ಮಹಿಳೆ ಸೇರಿದಂತೆ ಇಂದು 11 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.

ಇoದು ತಾಲೂಕಾ ಆಸ್ಪತ್ರೆಯಿಂದ ಇಬ್ಬರು, ಡಿಸ್ಚಾರ್ಜ್ ಆಗಲಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿ 43 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button