Uttara Kannada

ಹಂದಿ ಕಾಟದ ನಿಯಂತ್ರಣಕ್ಕೆ ಹಾಕಿದ ಬೇಲಿಯ ಬಲೆಗೆ ಸಿಲುಕಿದ ಕಾಡು‌ಮೊಲ

  • ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಪ್ರಾಣಿಪ್ರೇಮಿ ಶೈಲೇಶ್’
  • ಮೊಲದ ಕಾಲು ತೊಡೆಗೆ ಭಾರಿ ಗಾಯಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಪ್ರಾಣಿಪ್ರೇಮಿ ಶೈಲೇಶ್

ಭಟ್ಕಳ: ತೀರಾ ಸಾದು ಪ್ರಾಣಿಯಾದ ಕಾಡು ಮೊಲವೊಂದು ಆಹಾರಕ್ಕಾಗಿ ಅಲೆದಾಡುವ ವೇಳೆ ಆಕಸ್ಮಿಕವಾಗಿ ಹಂದಿಕಾಟಕ್ಕಾಗಿ ಹಾಕಲಾದ ಬೇಲಿ ಬಲೆಯಲ್ಲಿ ಸಿಲುಕಿ ಭಾರಿ ದೊಡ್ಡ ಗಾಯದೊಂದಿಗೆ ಬಳಲುತ್ತಿದ್ದನ್ನು ಕಂಡ ಪ್ರಾಣಿ ಪ್ರೇಮಿ, ಪತ್ರಕರ್ತ ಶೈಲೇಶ್ ವೈದ್ಯ ಅವರು ಮೊಲಕ್ಕೆ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದರು.

ಸಾಮಾನ್ಯವಾಗಿ ಕಾಡುಪ್ರಾಣಿಗಳು ನಾಡಿಗೆ ಬಂದಾಗ ಒಂದಲ್ಲಾ ಒಂದು ಘಟನೆಗಳು ಆಗಾಗ ನಡೆಯುತ್ತಾ ಇರುತ್ತದೆ. ಅದರಂತೆ ಕಾಡು ಮೊಲವೊಂದು ಆಕಸ್ಮಿಕವಾಗಿ ಬಲೆಗೆ ಸಿಲುಕಿ ಪರಿತಪಿಸಿದೆ.

ಎಂದಿನಂತೆ ಮುಂಜಾನೆ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಮಾರ್ಗ ಮದ್ಯೆ ಗದ್ದೆಗೆ ಹಂದಿ ಕಾಟ ತಪ್ಪಿಸಲು ರೈತರು ಹಾಕಿದ‌ ಬೇಲಿಯ ಬಲೆಗೆ ಕಾಡು ಮೊಲವೊಂದು ಸಿಕ್ಕಿಕೊಂಡು ತಪ್ಪಿಸಿಕೊಳ್ಳಲು ಹರ ಸಾಹಸ ಪಡುತ್ತಿತ್ತು. 

ಭಯದಲ್ಲಿ ಮೊಲದ ಕಾಲು ತೊಡೆಯ ಭಾಗಕ್ಕೆ ತುಂಬಾ ಗಾಯಗಳಾಗಿದ್ದು ಅದನ್ನು ಗಮನಿಸಿದ ಶೈಲೇಶ ಅವರು ಮನೆಗೆ ತಂದು ಪ್ರಾಥಮಿಕ ಉಪಚಾರ ಮಾಡಿ ತದನಂತರ ಭಟ್ಕಳದ ಪಶು ಇಲಾಖೆಗೆ ಮೊಲವನ್ನು ಕರೆತಂದು‌ ಪಶು ವೈದ್ಯ ಮಿಥುನ ಅವರಿಗೆ ಪೋನ್ ಮಾಡಿ ಔಷದೋಪಚಾರ ಮಾಡಿಸಿ ಆಹಾರ ನೀಡಿ ಅರಣ್ಯ ಇಲಾಖಾ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.

ತೀರಾ ಗಾಯದಿಂದ‌ ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿರುವ ಮೊಲಕ್ಕೆ ಇನ್ನು 3-4 ದಿನವೂ ಚಿಕಿತ್ಸೆಯ ಅವಶ್ಯಕತೆ ಇದ್ದು ಈ ಜವಾಬ್ದಾರಿಯನ್ನು ಅರಣ್ಯ ಇಲಾಖೆಯು ವಹಿಸಿಕೊಂಡಿದ್ದು ಪ್ರಾಣಿ ಪ್ರೇಮಿ, ಪತ್ರಕರ್ತ ಶೈಲೇಶ ಅವರ ಕಾಳಜಿಗೆ ಅರಣ್ಯ ಇಲಾಖೆಯೂ ಧನ್ಯವಾದ ಸಲ್ಲಿಸಿದರು. ‌

ಉದಯ್ ಎಸ್ ನಾಯ್ಕ ಭಟ್ಕಳ

Back to top button