Important
Trending

ಮೋಜು-ಮಸ್ತಿ-ಬೆಟ್ಟಿಂಗ್ ದಾಸನಾಗಿದ್ದ ಅರ್ಚಕ: ಸಾಲ ತೀರಿಸಲು ದೇವಿಯ ಆಭರಣವನ್ನೇ ಕದ್ದ

ಆನ್ ಲೈನ್ ರಮ್ಮಿ, ಬೆಟ್ಟಿಂಗ್ ವ್ಯಾಮೋಹ
ಹಣಕಾಸು ಸ್ಥಿತಿ ನಿಭಾಯಿಸಲು ಸಾಲ
ಸಾಲ ತೀರಿಸಲು ಕಳ್ಳತನ

ಭಟ್ಕಳ: ತನ್ನ ಮೋಜು ಮಸ್ತಿಗಾಗಿ ಮಾಡಿರುವ ಸಾಲ ತೀರುಸುವ ಸಲುವಾಗಿ ದೇವರ ಅಭರಣ ಕದ್ದ ಅರ್ಚಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ಹೌದು ಭಟ್ಕಳ ತಾಲೂಕಿನ ಮುಂಡಳ್ಳಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿನ ದೇವರ ಗರ್ಭಗುಡಿಯಲ್ಲಿದ್ದ ಚಿನ್ನಾಭರಣ ನಾಪತ್ತೆದ ಪ್ರಕರಣವನ್ನು ಭಟ್ಕಳ ಪೊಲೀಸರು ಭೇದಿಸಿದ್ದು, ಆರೋಪಿ ಅರ್ಚಕನನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ತನ್ನ ಮೋಜು ಮಸ್ತಿಗಾಗಿ ದೇವರ ಆಭರಣ ಕದ್ದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.


ಆರೋಪಿ ಸತೀಶ ರಾಮಚಂದ್ರ ಭಟ್ ಈತ ಜೂಜು ಕೋರನಾಗಿದ್ದು ತಾನು ಮಾಡಿರುವ ಜೂಜಾಟದ ಸಾಲ ತೀರಿಸಲು ಈ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಆರೋಪಿ ಇಲ್ಲಿ ತನಕ ಯಲ್ಲಾಪುರ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು., ಎಲ್ಲಾ ಕಡೆಗಳಲ್ಲಿ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲಗಾರರು ಈತ ಭಟ್ಕಳದಲ್ಲಿರುವ ವಿಳಾಸ ತಿಳಿದು ಹುಡುಕಿಕೊಂಡು ಬಂದಿದ್ದರು. ಈತ ಆನ್ಲೈನ್ ಜೂಜು, ಮೋಜು ಮಸ್ತಿಗೆ ದಾಸನಾಗಿದ್ದು, ಈ ಸಾಲ ತೀರಿಸಲು ದೇವರ ಆಭರಣ ಕದ್ದ ಎನ್ನಲಾಗಿದೆ.


ತನ್ನ ಸಾಲವನ್ನು ಮರುಪಾವತಿ ಮಾಡಲು ದೇವಸ್ಥಾನದ ಚಿನ್ನಾಭರಣ ಕದ್ದು ಯಲ್ಲಾಪುರದ ಫೈನಾನ್ಸ್ ಒಂದರಲ್ಲಿ ಬೇರೆಯವರ ಹೆಸರಿನಲ್ಲಿಟ್ಟು ಹಣ ಪಡೆದಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈತ ಕಳೆದ ಜೂನ್ ತಿಂಗಳಲ್ಲೇ ದೇವಸ್ಥಾನದ ಪೀಠದ ಹಿಂಬದಿಯ ಟ್ರಂಕ್‌ನಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದ. ಸಾಲಗಾರರ ಕಾಟ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆ ಆಗಸ್ಟ್ ನಲ್ಲಿ ಚಿನ್ನವನ್ನು ಕದ್ದು ಸಾಗಿಸಿದ್ದ ಎನ್ನಲಾಗಿದೆ. ಲಾಕ್ ಡೌನ್ ಸಂದರ್ಭ ಮತ್ತು ದೇವಸ್ಥಾನದಲ್ಲಿ ಕೋವಿಡ್ ಹಿನ್ನೆಲೆ ಪೂಜೆ ಹಾಗೂ ಸೇವೆ ನಿಷೇಧ ಇರುವುದನ್ನು ಬಳಸಿಕೊಂಡು ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.


ಈತನ ಬಗ್ಗೆ ಚಿತ್ರದುರ್ಗಾ, ಬೆಂಗಳೂರು, ತುಮಕೂರು, ಮುಂತಾದ ಕಡೆ ಜಾಲಾಡಿ ಪೊಲೀಸರು ಅಂತಿಮವಾಗಿ ಸಾಗರ ಬಸ್ ನಿಲ್ದಾಣದಲ್ಲಿ ಬೇರೆ ಊರಿಗೆ ಹೋಗಲು ಸಂಚು ರೂಪಿಸಿದವನನ್ನು ಹಿಡಿದು ಭಟ್ಕಳಕ್ಕೆ ಕರೆತಂದಿದ್ದಾರೆ. ಆನ್ಲೈನ್ ರಮ್ಮಿ, ಐಪಿಎಲ್ ಬೆಟ್ಟಿಂಗ್ ಸೇರಿದಂತೆ ವಿಭಿನ್ನ ರೀತಿಯ ಚಟಗಳಿಗೆ ಅಂಟಿಕೊoಡು ಆರ್ಥಿಕವಾಗಿ ಹೋಗಿದ್ದ ಹಣಕಾಸು ಸ್ಥಿತಿಯನ್ನು ನಿಭಾಯಿಸಲು ಯಲ್ಲಾಪುರ-ಬೆಂಗಳೂರು ಮತ್ತಿತರ ಕೆಲಸಗಳಲ್ಲಿ ರುವ ತನ್ನ ಗೆಳೆಯರಿಂದ ಸಾಲ ಪಡೆದುಕೊಂಡಿರುವುದು ವಿಚಾರಣೆಯಲ್ಲಿ ಬಯಲಾಗಿದೆ. ಇಂಥವರಿoದ ಮರ್ಯಾದೆಯಿಂದ ಬದುಕುತ್ತಿರುವ ಅರ್ಚಕರನ್ನು ಸಾರ್ವಜನಿಕರು ಬೇರೆ ದೃಷ್ಟಿಯಿಂದ ನೋಡುವಂತಾಗಿದೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button