Follow Us On

WhatsApp Group
Big News
Trending

ಮುಜರಾಯಿ ವಶಕ್ಕೆ ಸಿಗಂದೂರು ದೇವಸ್ಥಾನ?

ಅರ್ಚಕರು ಮತ್ತು ಧರ್ಮದರ್ಶಿಗಳ ಶೀತಲಸಮರ ಹಿನ್ನಲೆ
ಸರ್ಕಾರದಿಂದ ಸಮಿತಿ ರಚನೆ

ಪ್ರಸಿದ್ಧ ಶಕ್ತಿಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಅರ್ಚಕರು ಮತ್ತು ಧರ್ಮದರ್ಶಿಗಳ ಶೀತಲಸಮರ ತಾರಕ್ಕೇರಿರುವ ಬೆನ್ನಲ್ಲೆ ದೇವಸ್ಥಾನದ ಆಡಳಿತಕ್ಕೆ ಸಂಬoಧಿಸಿದoತೆ ಸರ್ಕಾರ ಸಮಿತಿ ರಚಿಸಿದೆ. ದೇಗುಲದ ಆಡಳಿತಕ್ಕೆ ಸಲಹೆ ನೀಡಲು ಮತ್ತು ಮೇಲ್ವಿಚಾರಣೆಯ ಉದ್ದೇಶದಿಂದ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಮುಂದಿನ ವಾರ ಸಮಿತಿಯ ಮೊದಲ ಸಭೆ ನಡೆಯಲಿದೆ.

ಈ ಸಮಿತಿಯು ದೇವಸ್ಥಾನದ ದೈನಂದಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ದೇವಸ್ಥಾನಲ್ಲಿ ಯಾವುದೆ ಗೊಂದಲ ಆಗಬಾರದು ಎಂದು ತಡೆಯುವುದು ಇದರ ಉದ್ದೇಶ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇವಸ್ಥಾನದಲ್ಲಿನ ಗೊಂದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಅವರೊಂದಿಗೆ ಸಿಎಂ ಚರ್ಚೆ ನಡಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಪರಿಣಿತರೊಂದಿಗೆ ಚರ್ಚಿಸಿ ಸಮಿತಿ ರಚಿಸಿದ್ದಾರೆ ಎನ್ನಲಾಗಿದೆ. ಸಿಗಂದೂರು ದೇಗುಲವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು ಎಂಬ ವಾದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಅಳೆದು ತೂಗಿ ಸಮಿತಿ ರಚಿಸಿ ಜಾಣ ಹೆಜ್ಜೆ ಇಟ್ಟಿದೆ.

ಮುಜರಾಯಿ ವಶಕ್ಕೆ ಸಿಗಂದೂರು ದೇವಸ್ಥಾನ?

ಈಗಿನ ವಿದ್ಯಮಾನ ಹಾಗೂ ಸರ್ಕಾರದ ಕೆಲ ಮೂಲಗಳ ಮಾಹಿತಿ ಪ್ರಕಾರ ಶೀಘ್ರದಲ್ಲಿ ದೇವಸ್ಥಾನವನ್ನು ಮುಜರಾಯಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದಕ್ಕೆ ಹಲವರ ಬೆಂಬಲವು ಸಹ ಇದೆ ಎನ್ನಲಾಗಿದ್ದು ಇದರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಈ ಬಗ್ಗೆ ಹೆಚ್ಚಿನ ಒಲವು ತೋರ್ಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸದ್ಯ ಮುಜರಾಯಿ ಇಲಾಖೆಯ ಮುಖ್ಯ ಕಾರ್ಯದರ್ಶಿಬಳಿ ದೇವಸ್ಥಾನವನ್ನು ಮುಜರಾಯಿಗೆ ಒಪ್ಪಿಸುವ ಪ್ರಸ್ತಾಪದ ಕಡತವಿದ್ದು ಕೆಲವೇ ತಿಂಗಳಲ್ಲಿ ಮುಜರಾಯಿಗೆ ಒಪ್ಪಿಸಬೇಕಾ ಅಥವಾ ಈಗಿರುವ ಸ್ಥಿತಿಯನ್ನು ಮುಂದುವರೆಸಬೇಕಾ ಎಂಬ ನಿರ್ದಾರ ಕೈಗೊಳ್ಳಲಿದ್ದಾರೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button