Uttara Kannada
Trending

ಅಕ್ರಮವಾಗಿ ಹಿಂಸಾತ್ಮಕವಾಗಿ ಗೋಸಾಗಾಟ: ಮೂವರ ಬಂಧನ

ಶಿರಸಿ: ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಸುಪರ್ ಕ್ಯಾರಿ ಟರ್ಬೊ ಮಾದರಿ ವಾಹನ ದಲ್ಲಿ ಹಿಂಸಾತ್ಮಕವಾಗಿ ಜಾನುವಾರಗಳನ್ನು ಸಾಗಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಸವರಾಜ ಗುತ್ಯಪ್ಪ ಕೊಪ್ಪದ ಹಾನಗಲ್, ಹನುಮಂತ ಸುರೇಶಪ್ಪ ಗಡ್ಡದ ಹಾನಗಲ್, ಅಲ್ಲಾಭಕ್ಷ ಲಾಲಸಾಬ್ ನದಾಫ್ ಹಾನಗಲ್ ಎಂದು ಗುರುತಿಸಲಾಗಿದೆ.
ಶಿರಸಿ-ಯಲ್ಲಾಪುರ ಚಕ್ ಪೋಸ್ಟ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಕ್ರಮಗೋಸಾಗಾಟವನ್ನು ಪತ್ತೆಮಾಡಿದ್ದಾರೆ.

ಸಿ.ಪಿ.ಐ ಶಿರಸಿರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಸಂಬoಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Related Articles

Back to top button