ಕುಮಟಾದಲ್ಲಿ 12, ಹೊನ್ನಾವರದಲ್ಲಿ 3 ಪಾಸಿಟಿವ್

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 12 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಗೋಕರ್ಣದ ಕೋಟಿತಿರ್ಥದಲ್ಲಿ 3, ತದಡಿಯಲ್ಲಿ 2, ಹೆಗಡೆಯಲ್ಲಿ 2, ಹೆರವಟ್ಟಾ, ಮೂಲೇಕೇರಿ, ಹಿರೆಗುತ್ತಿ, ಜೋಡ್‌ಕೆರೆಯಲ್ಲಿ ತಲಾ ಒಂದೊoದು ಪ್ರಕರಣ ದಾಖಲಾಗಿದೆ.
ತದಡಿಯ 72 ವರ್ಷದ ವೃದ್ದೆ, 47 ವರ್ಷದ ಪುರುಷ, ಕೋಟಿತೀರ್ಥದ 42 ವರ್ಷದ ಪುರುಷ, 69 ವರ್ಷದ ಮಹಿಳೆ, 48 ವರ್ಷದ ಪುರುಷ, ಹೆರವಟ್ಟಾದ 39 ವರ್ಷದ ಪುರುಷ, ಜೋಡ್‌ಕೆರೆಯ 32 ವರ್ಷದ ಪುರುಷ, ಹಿರೆಗುತ್ತಿಯ 24 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಹೆಗಡೆಯ 10 ವರ್ಷದ ಬಾಲಕ, 73 ವರ್ಷದ ವೃದ್ದ, 62 ವರ್ಷದ ಪುರುಷ, ಮೂಲೇಕೇರಿಯ 70 ವರ್ಷದ ವೃದ್ಧನಿಗೂ ಪಾಸಿಟಿವ್ ಬಂದಿದೆ. ಇಂದು 12 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,657ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಮೂರು ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಇಂದು ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಇಂದು ಕವಲಕ್ಕಿ-ಮಂಕಿ-ಹಳದೀಪುರ ಬಾಗದಲ್ಲಿ ತಲಾ ಒಂದೊoದು ಪ್ರಕರಣ ಪತ್ತೆಯಾಗಿದೆ.
ಕವಲಕ್ಕಿಯ 56 ವರ್ಷದ ಪುರುಷ, ಮಂಕಿಯ 40 ವರ್ಷದ ಪುರುಷ, ಹಳದೀಪುರದ 34 ವರ್ಷದ ಮಹಿಳೆ ಸೇರಿದಂತೆ ಇಂದು ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ಜನರು ಗುಣಮುಖರಾಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 4 ಜನರು ಮತ್ತು ವಿವಿಧ ಆಸ್ಪತ್ರೆಯಲ್ಲಿ 13 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವೀರಭದ್ರೇಶ್ವರ ಬೀರದೇವ ದೇವಸ್ಥಾನದ ಪಕ್ಕದಲ್ಲಿ ನೂತನ ಸಮುದಾಯ ಭವನ: ಮೇ 4 ರಂದು ಭವ್ಯ ಕಟ್ಟಡ ಉದ್ಘಾಟನೆ
- ಭಟ್ಕಳದ ಮುಂಡಳ್ಳಿಯಲ್ಲಿ MGM ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಶುಭಾರಂಭ
- KSRTC ಬಸ್ ಮತ್ತು ಕಾರ್ ನಡುವೆ ಭೀಕರ ಅಪಘಾತ: ಇಬ್ಬರ ಸಾವು?
- ಹೊನ್ನಾವರ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವರ್ದಂತಿ ಉತ್ಸವ: ವಿವಿಧ ಸೇವೆ ಸಲ್ಲಿಸಿದ ಭಕ್ತರು
- ಭಟ್ಕಳದಲ್ಲಿ ಏಂಪೈರ್ ಫ್ಯಾಮೀಲಿ ರೆಸ್ಟೊರೆಂಟ್ ಶುಭಾರಂಭ : ಸೀ ಪುಡ್, ಇಂಡಿಯನ್ ಹಾಗೂ ಚೈನಿಸ್ ಫುಡ್ ಸೇರಿ ವಿವಿಧ ಖಾದ್ಯ ಲಭ್ಯ