Follow Us On

WhatsApp Group
Big News
Trending

Idagunji Temple: ಪುರಾಣ ಪ್ರಸಿದ್ಧ ಇಡಗುಂಜಿ ದೇವಾಲಯದಲ್ಲಿ ಗಣೇಶ ಚತುರ್ಥಿ ಆಚರಣೆಯ ದಿನ ಯಾವುದು? ಸಪ್ಟೆಂಬರ್ 18 ಅಥವಾ 19? ನೀವೇ ನೋಡಿ

ಮಹಾ ಮಂಗಳಾರತಿ ಸಮಯ ಯಾವುದು? ಮಾಹಿತಿ ನೀಡಿದ ದೇವಾಲಯದ ಪ್ರಧಾನ ಅರ್ಚಕರು

ಹೊನ್ನಾವರ: ರಾಜ್ಯದ ಪುರಾಣ ಪ್ರಸಿದ್ಧ ತಾಣವಾದ ಇಡಗುಂಜಿಯಲ್ಲಿ (Idagunji Temple) ಸಪ್ಟೆಂಬರ್ 19ರ ಮಂಗಳವಾರ ಗಣೇಶ ಚತುರ್ಥಿ ನಡೆಯಲಿದೆ. ಈ ಕುರಿತು ದೇವಾಲಯದ ಪ್ರಧಾನ ಅರ್ಚಕರಾದ ವಿಷ್ಙು ಭಟ್ಟ ಅವರು ಮಾಹಿತಿ ನೀಡಿದ್ದಾರೆ. ಈ ವರ್ಷದ ಗಣೇಶ ಚತುರ್ಥಿ ಹಬ್ಬದ ಆಚರಣೆಯ ದಿನಾಂಕ ಜನರಿಗೆ ಗೊಂದಲದಿoದ ಕೂಡಿದೆ. ಬಗ್ಗೋಣ ಮತ್ತು ಧಾರ್ಮಿಕ ಪಂಚಾoಗ ಬಳಸುವವರು ಪ್ರತ್ಯೇಕವಾಗಿ ದಿನಾಂಕ 18 ಮತ್ತು 19 ರಂದು ಹಬ್ಬ ಆಚರಿಸಲಿದ್ದಾರೆ.

ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿಯ ಸನ್ನಿದಿಯಲ್ಲಿ ಬಗ್ಗೋಣ ಪಂಚಾoಗದoತೆ ದಿನಾಂಕ 19 ರ ಮಂಗಳವಾರ ನಡೆಯಲಿದೆ. ಗಣೇಶ ಚತುರ್ಥಿಗೆ ಆಗಮಿಸುವ ಸಮಸ್ತ ಭಕ್ತಾದಿಗಳು ಇದೆ ದಿನ ಬಂದು ಮಹಾಗಣಪತಿಯ ಅನುಗ್ರಹಕ್ಕೆ ಪಾತ್ರರಾಗಿ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ,

(Idagunji Temple) ದಿನಾಂಕ 29ರ ಮಂಗಳವಾರ ನಡೆಯುವ ಮಹಾಚೌವತಿ ದಿನದಂದು ಮಹಾ ಮಂಗಳಾರತಿ 4-30 ರಿಂದ 5 ಗಂಟೆಯವರೆಗೆ ನಡೆಯಲಿದೆ. ಅಂದು ವಾಹನ ಪೂಜೆ ಇರುವುದಿಲ್ಲ. ಸೆಪ್ಟೆಂಬರ್ 18 ರಿಂದ 19 ರ ವರೆಗೆ ಯಾವುದೆ ಅಪ್ಪಣೆಚೀಟಿ ಇರುವುದಿಲ್ಲಾ ಎಂದು ಅವಚರು ಮಾಹಿತಿ ನೀಡಿದಾರೆ.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Back to top button