Focus News
Trending

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಕುಮಟಾ ಮಿರ್ಜಾನ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಹಿಂದಿ ದಿವಸ ಆಚರಣೆ

ಕುಮಟಾ: ಮಿರ್ಜಾನಿನ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ, ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನ್ ಲಯನ್ಸ್ ಕ್ಲಬ್, ಕುಮಟಾ ಅವರ ಸಂಯುಕ್ತ ಆಶ್ರಯದಲ್ಲಿ ಹಿಂದಿ ದಿವಸವನ್ನು ವಿಜೃಂಭಣೆಯಿoದ ಆಚರಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ವಿಷ್ಣು ಪಟಗಾರ ರವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿ ಭಾಷೆ ನಮ್ಮ ದೇಶದ ಜನಸಂಖ್ಯೆಯ ಬಹುಪಾಲು ಜನರು ಮಾತನಾಡುವ ಭಾಷೆ. ಹಿಂದಿಯನ್ನು ನಮ್ಮ ರಾಷ್ಟ್ರೀಯ ಭಾಷೆ ಎಂದು ಸರ್ಕಾರ ಘೋಷಣೆ ಮಾಡಬೇಕು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ದಾಮೋದರ ಭಟ್ ಮಾತನಾಡಿ ಹಿಂದಿ ಸರಳ ಭಾಷೆ, ನಾನು ಕೂಡ ಅಗತ್ಯ ಸಂದರ್ಭದಲ್ಲಿ ಹಿಂದಿಯಲ್ಲೇ ವ್ಯವಹರಿಸುತ್ತೇನೆ, ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಎಲ್ಲಾ ಶಿಕ್ಷಕ ಸಿಬ್ಬಂದಿಗಳು ಇಂದು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆ ಜೊತೆಗೆ ಹಿಂದಿ ಭಾಷೆ ಕಲಿಕೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸುವಂತೆ ಮಕ್ಕಳನ್ನು ಪ್ರೇರೇಪಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಆಡಳಿತಾಧಿಕಾರಿ ಜಿ. ಮಂಜುನಾಥ ಮಾತನಾಡಿ ನಮ್ಮ ದೇಶದಲ್ಲಿ ಹಿಂದಿ ಭಾಷೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿ, ವಿವಿಧತೆಯಲ್ಲಿ ಏಕತೆಗೆ ಹಿಂದಿ ಭಾಷೆಯಲ್ಲಿ ಮಾತಾನಾಡುವುದು ತುಂಬಾ ಸಹಕಾರಿ ಎಂದರು. ಹಿರಿಯ ಶಿಕ್ಷಕರಾದ ಎಂ ಜಿ ಹಿರೇಕುಡಿಯುವರು ಹಿಂದಿ ದಿವಸದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಹಿಂದಿ ಭಾಷೆಯನ್ನು ಉಳಿಸಿ-ಬೆಳೆಸಿ ಸಮೃದ್ಧ ಗೊಳಿಸುವಲ್ಲಿ ಭಾರತೀಯರಾದ ನಮ್ಮ ನಿಮ್ಮೆಲ್ಲರ ಪಾತ್ರ ಹಿರಿದಾಗಿರುತ್ತದೆ ಎಂದರು.

ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಲೀನಾ ಎಂ. ಗೋನೆ ಹಳ್ಳಿಯವರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿಂದಿ ದಿವಸದ ನಿಮಿತ್ತ ಹಲವಾರು ಸ್ಪರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು. ಹಿಂದಿ ವಿಭಾಗದ ಶಿಕ್ಷಕಿ ವೈಲೆಟ್ ಕ್ರಸ್ಟಾ ಹಿಂದಿ ದಿವಸ ದಿನಾಚರಣೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು. ಇದೆ ಸಂದರ್ಭದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾದ ಸೌಭಾಗ್ಯ ಬಾಳೇರಿ, ಮತ್ತು ಹಿಂದಿ ಶಿಕ್ಷಕರಾದ ಕಾಂಚನಾ ನಾಯ್ಕ, ಸೀಮಾ ಡಿಸೋಜ ಮತ್ತು ವೈಲೆಟ್ ಕ್ರಸ್ಟಾರವರನ್ನು ಸನ್ಮಾನಿಸಲಾಯಿತು.

ವಿಸ್ಮಯ ನ್ಯೂಸ್, ಕುಮಟಾ

Back to top button