Important
Trending

Neelagodu Yakshi Chowdeshwari: ಸಾರ್ವಜನಿಕ ಮಾಹಿತಿ: ಶ್ರೀ ಕ್ಷೇತ್ರ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ ಮುಂದಿನ ಅಮವಾಸೆಯಂದು ತೀರ್ಥಸ್ನಾನದ ಸಮಯ ಬದಲು

ಹೊನ್ನಾವರ: ಶ್ರೀ ಕ್ಷೇತ್ರ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ (Neelagodu Yakshi Chowdeshwari) ಅಮವಾಸೆಯಂದು ತೀರ್ಥಸ್ನಾನ ಯಾವಾಗಲು 1 ಗಂಟೆಯಿoದ ಆರಂಭವಾಗುತ್ತಿತ್ತು, ಆದರೆ ಮುಂದಿನ ಅಮವಾಸೆಯಂದು 11 ಗಂಟೆಯಿoದ 2 ರ ವರೆಗೆ ನಡೆಯಲಿದ್ದು, ಮುಂದಿನ ಅಮವಾಸೆಗೆ ಬರುವ ಭಕ್ತರು 11 ಗಂಟೆಯಿoದ 2 ಗಂಟೆಯ ಒಳಗೆ ಬನ್ನಿ ಎಂದು ದೇವಾಯದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಅವರು ಮಾಹಿತಿ ನೀಡಿದರು.

ಅಮವಾಸೆಯ ಹಿನ್ನಲೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ದೇವಿಗೆ ಉಡಿಸೇವೆ, ತುಪ್ಪದದೀಪ ಸೆವೆ, ಹೂವಿನ ಅಲಂಕಾರ ಸೇವೆ, ಹಣ್ಣುಕಾಯಿ ಸೇವೆ, ಅನ್ನದಾನ ಸೇವೆ, ನವ ಚಂಡಿಕಾ ಸೇವೆ, ಸಲ್ಲಿಸಿದರು. ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರಸಾದವಿತರಣೆ ಅನ್ನಸಂತರ್ಪಣೆ ನಡೆದವು, ಸಾವಿರಾರು ಸಂಖೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ತಿರ್ಥ ಸ್ನಾನದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಹೌದು, ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ದೇವಿ ಕ್ಷೇತ್ರದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಬಳ್ಕೂರ ನೀಲಗೋಡ ಯಕ್ಷಿ ಚೌಡೇಶ್ವರಿ ದೇವಿ ದೇವಾಲಯದಲ್ಲಿ (Neelagodu Yakshi Chowdeshwari) ಅಮವಾಸೆಯ ಹಿನ್ನಲೆಯಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆದವು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಡೆಯುವ ದರ್ಶನದಲ್ಲಿ ದೇವಿ ಸೂಚಿಸಿದ ಸೂಚನೆಯಂತೆ ಭಕ್ತರು ಅಮವಾಸೆಯಂದು ತೀರ್ಥ ಸ್ನಾನ ಮಾಡುತ್ತಾರೆ, ಪ್ರಧಾನ ಅರ್ಚಕರಾದ ಮಾದೇವ ಸ್ವಾಮೀಯವರ ಮಾರ್ಗದರ್ಶನದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ, ಭಕ್ತರಿಗಾಗಿ ವಿಶೇಷ ಪ್ರಾರ್ಥನೆಗಳು ನಡೆಯುತ್ತದೆ,

ಮದುವೆಯಾಗದವರು, ವಿದ್ಯಾರ್ಥಿಗಳು, ಮಕ್ಕಳಾಗದವರು, ಸಾಲಬಾಧೆ-ಆರೋಗ್ಯ ಸಮಸ್ಯೆ ನಿರುದ್ಯೋಗಿಗಳು ರಾಜ್ಯದ ಮೂಲೆ ಮೂಲೆಯಿಂದ ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ, ರಾಜ್ಯ ಅಷ್ಟೆ ಅಲ್ಲದೆ ಹೊರ ರಾಜ್ಯದಿಂದಲು ಇಲ್ಲಿಗೆ ಬರುತ್ತಾರೆ, ಅಮವಾಸೆಯ ದಿನದಂದು ತೀರ್ಥ ಸ್ಥಾನ ವಿಶೇಷ ವಾಗಿದೆ, ಇಲ್ಲಿ ಪ್ರತಿನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ, ಪ್ರತಿ ಅಮವಾಸೆಯಂದು ತೀರ್ಥ ಸ್ನಾನ, ಪ್ರತಿ ಸಂಕಷ್ಟಿಯoದು ಭಕ್ತರ ಸಂಕಷ್ಟ ನಿವಾರಣೆಗಾಗಿ ಗಣಹೋಮ ನಡೆಯುತ್ತದೆ.

ನವ ಚಂಡಿಕಾ ಯಾಗದ ಪೂರ್ಣಾಹುತಿಯನ್ನು ದೇವಾಲಯದಲ್ಲಿ , ಚಾತುರ್ಮಾಸದಲ್ಲಿ ನಿರತರಾದ ಆಂಧ್ರಪ್ರದೇಶದ ಶಂಕರಾನoದ ಸರಸ್ವತಿ ಸಂಸ್ಥಾನ ಮಠದ ಸಂಚಾರಿ ಪೀಠದ ಶ್ರೀ ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸ್ವಾಮಿಜಿಯವರು ನೇರವೇರಿಸಿದರು, ದೇವಾಲಯಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಐದು ಸಾವಿರಕ್ಕು ಹೆಚ್ಚು ಭಕ್ತರು ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ತೀರ್ಥಸ್ನಾನದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button