Big News
Trending

ಜಿಲ್ಲೆಯ ನೂತನ ಎಸ್ಪಿಯಿಂದ ಅಂಕೋಲಾದಲ್ಲಿ ಪೊಲೀಸ ಸಿಬ್ಬಂದಿಗಳ ವಸತಿ ಸಮಚ್ಚಯಕ್ಕೆ ಅಡಿಗಲ್ಲು

ಅಂಕೋಲಾ : ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲೂಕಿನ ಪೊಲೀಸ್ ಸಿಬ್ಬಂದಿಗಳ ವಸತಿ ಸಮುಚ್ಚಯ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ಅವರು ಗುದ್ದಲಿ ಪೂಜೆ ನೆರವೇರಿಸಿ, ಅಡಿಗಲ್ಲನಿಟ್ಟು,ಕಟ್ಟಡ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು. ಭಟ್ಕಳ ಡಿವೈಎಸ್ಪಿ ಮಹೇಶ ಎನ್ ಕೆ, ಕಾರವಾರ ಗ್ರಾಮೀಣ ಠಾಣೆ ಸಿಪಿಐ, ಯು ಎಚ್ ಕಾತನಹಳ್ಳಿ, ಅಂಕೋಲಾ ಪಿ.ಎಸ್ ಐ (ಕಾ.ಸು ) ಉದ್ದಪ್ಪ ಧರೆಪ್ಪವವರ, ಮತ್ತು ಸಿಬ್ಬಂದಿಗಳು ಹಾಜರಿದ್ದರು. ಪೊಲೀಸ್ ಸಿಬ್ಬಂದಿಗಳಿಗೆ ಉಳಿದುಕೊಳ್ಳಲು ಸುಮಾರು 24 ಮನೆ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದ್ದು, ಗುತ್ತಿಗೆ ಪಡೆದವರು, ಸುವ್ಯವಸ್ಥಿತ ಮತ್ತು ಗುಣಮಟ್ಟದ ಕಟ್ಟಡ ಕಾಮಗಾರಿ ನಡೆಸಿ, ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಸಿ, ಇಲಾಖೆಗೆ ಹಸ್ತಾಂತರಿಸುವಂತಾಗಲಿ ಎಂದು ತಾಲೂಕಿನ ಪ್ರಜ್ಞಾವಂತ ಜನತೆ ಆಶಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button