Focus News
Trending

ಮಾರ್ಚ್ 30 ರಿಂದ ಬಾಗಿಲು ತೆರೆದುಕೊಳ್ಳಲಿರುವ, ಶ್ರೀ ಕೊಗ್ರೆ ಬೊಮ್ಮಯ್ಯದೇವರ ಮತ್ತು ಪರಿವಾರ ದೇವರ ದೇವಸ್ಥಾನ

ಅಂಕೋಲಾ:ತಾಲೂಕಿನ ಕೊಗ್ರೆಯ ಶ್ರೀಬೊಮ್ಮಯ್ಯ ದೇವರ ಸಂಪ್ರೋಕ್ಷಣೆ ಕಾರ್ಯಕ್ರಮ ಮಾರ್ಚ್ 30 ರ ಶನಿವಾರ ನಡೆಯಲಿದೆ. ಈ ಮೂಲಕ,ಅಷ್ಟ ಬಂದ ಮಹೋತ್ಸವದ ನಂತರ, ಭಕ್ತರಿಗೆ ಇನ್ನು ಮುಂದೆ ದೇವಾಲಯದ ಬಾಗಿಲು ತೆರೆದುಕೊಳ್ಳಲಿದ್ದು,ಶ್ರೀ ದೇವರ ದರ್ಶನ ಭಾಗ್ಯ ಲಭಿಸಲಿದೆ.

ಶನಿವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರ ಕೊಗ್ರೆ ಬೊಮ್ಮಯ್ಯ ದೇವರು, ರಾಕೇಶ್ವರ, ಬಂಡಾರ ದೇವರು ಹಾಗೂ ಉಳಿದ ಅಧಿದೇವತೆಗಳ ಹಾಗೂ ಪರಿವಾರ ದೇವರುಗಳ ದೇವಾಲಯಗಳ ಬಾಗಿಲು ತೆರೆಯಲಾಗುವುದು. ಮದ್ಯಾಹ್ನ 1 ಗಂಟೆಗೆ ದೇವರ ಪೂಜಾ ಕಾರ್ಯಕ್ರಮ ನೆರವೇರಲಿದೆ ದೇವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೊಗ್ರೆ ಶ್ರೀಬೊಮ್ಮಯ್ಯ ದೇವರ ದೇಗುಲ ನವೀಕರಣ ಸಮಿತಿ ವತಿಯಿಂದ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button