Important
Trending

ಗೋಕರ್ಣದಲ್ಲಿ ಗಾಂಜಾ ಘಮಲು: ಓಂ ಬೀಚ್ ರಸ್ತೆಯಲ್ಲಿ ಅಕ್ರಮ ಸಾಗಾಟ: ಇಬ್ಬರ ವಶ

ಗೋಕರ್ಣ: ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗೋಕರ್ಣ ಪೊಲೀಸರು ಬಂಧಿಸಿ,ಕಾನೂನು ಕ್ರಮ ಮುಂದುವರೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿಗಳಾದ ತೌಕೀರ ಅಹಮ್ಮದ್ ಅಬ್ದುಲ್ ಮಜೀದ(20),
ಮತ್ತು ನಿಹಾದ್ ಅಹಮ್ಮದ್ ಅಬ್ದುಲ್ ಮಜೀದ ಖಾನ್ (21 ) ಇವರು (ಕೆ.ಎ15 ಇ ಎಚ್ 4490) ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಡಿಕ್ಕಿಯಲ್ಲಿ ಸುಮಾರು 30 ಸಾವಿರ ರೂಪಾಯಿ ಮೌಲ್ಯದ 659 ಗ್ರಾಂ ತೂಕದ ಮಾದಕ ಗಾಂಜಾವನ್ನು ಇಟ್ಟುಕೊಂಡು, ಬಂಗ್ಲೆಗುಡ್ಡ ಗ್ರಾಮದ ಗೋಕರ್ಣ – ಓಂ ಬೀಚ್ ರಸ್ತೆ ಮೇಲೆ, ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿ,ಕಾನೂನು ಕ್ರಮ ಮುಂದುವರಿಸಿದ್ದಾರೆ. ಪ್ರಮುಖ ಪ್ರವಾಸಿ ತಾಣವಾಗಿರುವ ಗೋಕರ್ಣದ ಕೆಲವೆಡೆ ಆಗಾಗ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಪ್ರಕರಣ ದಾಖಲಾಗುತ್ತಿದ್ದು,ಮತ್ತಷ್ಟು ಬಿಗಿ ಕಾನೂನು ಕ್ರಮ ಜರುಗಿಸಬೇಕೆಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button