Focus News
Trending

ದಕ್ಷಿಣೋತ್ತರ ಜಿಲ್ಲೆಗಳ ಮೀನುಗಾರ ಪ್ರಮುಖರ ಸಭೆ: ಟೊಂಕದ ವಾಣಿಜ್ಯ ಬಂದರು ವಿರೋಧಿ ಹೋರಾಟ ತೀವ್ರಗೊಳಿಸುವ ಕುರಿತು ಚರ್ಚೆ

ಹೊನ್ನಾವರ: ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಕಾಸರಕೋಡ ಟೊಂಕದ ವಾಣಿಜ್ಯ ಬಂದರು ವಿರೋದಿ ಹೋರಾಟವನ್ನು ತೀವ್ರ ಗೊಳಿಸಲು ಏಪ್ರಿಲ್ 14ರವಿವಾರ ರಂದು ಮದ್ಯಾಹ್ನ 3ಕ್ಕೆ ದಕ್ಷಿಣೋತ್ತರ ಜಿಲ್ಲೆಗಳ ಮೀನುಗಾರ ಪ್ರಮುಖರ ಮತ್ತು ಮೀನುಗಾರರ ತುರ್ತು ಸಭೆ ಕಾಸರಕೋಡ ಹಿರೇಮಠ ಸಭಾಂಗಣದಲ್ಲಿ ಆಯೋಜಿಸಲಾಗಿದೆ .ಕರಾವಳಿಯ ವಿವಿಧೆಡೆ ಮೀನುಗಾರಿಕೆಗೆ ಪ್ರಶಸ್ತವಾಗಿರುವ ಕಡಲತೀರಗಳನ್ನು ಅಭಿವೃದ್ದಿಯ ನೆಪದಲ್ಲಿ ಕರಾವಳಿಯ ಧಾರಣಾಶಕ್ತಿಗೆ ಮೀರಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸಲು, ಸುಂದರ ಪರಿಸರದ ಕಡಲತೀರಗಳನ್ನು ಖಾಸಗಿಭಂಡವಾಳಶಾಹಿಗಳಿಗೆ ಪರಭಾರೆ ಮಾಡಲಾಗುತ್ತಿದೆ.

ಈ ಉದ್ದೇಶಕ್ಕೆ ಕಡಲತೀರದ ಉಬ್ಬರದ ರೇಖೆಯಿಂದ 50 ಮೀಟರ ಕಡಲತೀರವು ಬಂದ ರು ಇಲಾಖೆ ತನ್ನದೆಂದು ಹೇಳಿ ಕಡಲ ತೀರದ 150 ಮೀಟರ್ ಅಗಲದ ಭೂಭಾಗದಿಂದ ಹಲವೆಡೆ ಮೀನುಗಾರರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದೆ. ಇದರಿಂದ ಕರಾವಳಿಯ ಸಾವಿರಾರು. ಮೀನುಗಾರ ಕುಟುಂಬಗಳ ಬದುಕು ಬೀದಿಗೆ ಬರುವ ಅಪಾಯ ಎದುರಾಗಿದೆ . ಈ ಉದ್ದೇಶಿತ ಯೋಜನೆಯ ಅನುಷ್ಠಾನವಾದರೆ ಮೀನುಗಾರಿಕೆಗೆ ಹಿನ್ನಡೆ ಆಗುವ ಜೊತೆಯಲ್ಲಿ ಕಡಲತೀರದ ಉತ್ತಮ ಪರಿಸರವನ್ನು ಸಹ ಕಳೆದುಕೊಳ್ಳಲಿದ್ದೇವೆ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆ ಆಗಲಿದೆ.

ಮೀನುಗಾರರ ಸ್ವಾಭಿಮಾನವನ್ನು ಕೆಣಕುವ ಸಾಹಸ ಮಾಡಿದವರಿಗೆ ಮೀನುಗಾರರು ಒಗ್ಗಟ್ಟಿನ ಬಲಪ್ರದರ್ಶನದ ಮೂಲಕ ಉತ್ತರಿಸಬೇಕಿದೆ. ಜಿಲ್ಲೆಯಲ್ಲಿ ಪಕ್ಷಭೇದ ಮರೆತು ಮೀನುಗಾರರ ಒಗ್ಗಟ್ಟನ್ನು ಬಲಪಡಿಸುವ ಉದ್ದೇಶದಿಂದ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರ ಪ್ರಮುಖರ ಮತ್ತು ಆಸಕ್ತ ಮೀನುಗಾರರ ತುರ್ತು ಸಮಾವೇಶವನ್ನು ಇದೇ ಬರುವ ಎಪ್ರಿಲ 14 ರ ಮಧ್ಯಾಹ್ನ 3 ಘಂಟಗೆ, ಕಾಸರಕೋಡ ಇಕೋ ಬೀಚ್ ಹತ್ತಿರದ ,ಹಿರೇಮಠ ಸೆಂಟ್ ಜೋಶೆಪ್ ಸಭಾಂಗಣದಲ್ಲಿ ಮೀನುಗಾರರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿದೆ . ಈ ಸಭೆಗೆ ಆಸಕ್ತ ಮೀನುಗಾರರು ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬಹುದೆಂದು ಕಾಸರಕೋಡ ಟೊಂಕದ ಮೀನುಗಾರ ಕಾರ್ಮಿಕರ ಸಂಘದ ಮುಖಂಡರು ಮನವಿ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button