ಗದ್ದೆಗೆ ತೆರಳಿದ್ದಾಗ ದಿಡೀರ್ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಹಿನ್ನಲೆ ಗಾಯಕ

ರಂಗಭೂಮಿಯ ಸಂಗೀತ ನಿರ್ದೇಶಕ ಇನ್ನಿಲ್ಲ

ಸಿದ್ದಾಪುರ: ರಂಗಭೂಮಿಯ ಸಂಗೀತ ನಿರ್ದೇಶಕ ಮತ್ತು ಖ್ಯಾತ ಹಿನ್ನೆಲೆ ಗಾಯಕ ಕೊಂಡ್ಲಿಯ ರಾಮಕೃಷ್ಣ ಕೊಂಡ್ಲಿ ಗದ್ದೆಗೆ ತೆರಳಿದ್ದಾಗ ದಿಡೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಗದ್ದೆಗೆ ತೆರಳಿದ್ದ ವೇಳೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ಸುಧೀರ್ಘ ಕಾಲ ಸಾಮಾಜಿಕ ನಾಟಕದಲ್ಲಿ ಸಂಗೀತ ನಿರ್ದೇಶಕ ಹಾಗೂ ಹಿನ್ನೆಲೆ ಗಾಯಕರಾಗಿ ನೂರಾರು ನಾಟಕಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.

ಶಾಲೆಯಲ್ಲಿ ಕಿಟಕಿಯ ಹೊರಗಡೆ ಇದ್ದ ಪೆನ್ಸಿಲ್ ತರುವಾಗ ಕಚ್ಚಿದ ಹಾವು: ವಿದ್ಯಾರ್ಥಿ ಗಂಭೀರ

ಕೊಂಡ್ಲಿ ರಾಮಕೃಷ್ಣಣ್ಣ ಎಂದೇ ಖ್ಯಾತರಾಗಿದ್ದ ರಾಮಕೃಷ್ಣ ಕೊಂಡ್ಲಿ ನಿಧನಕ್ಕೆ ರಂಗಭೂಮಿ ಕಲಾವಿದರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version