Important
Trending

ಚಲಿಸುತ್ತಿದ್ದ ಬೈಕ್ ನಲ್ಲಿ ಬೆಂಕಿ: ಅಗ್ನಿಗೆ ಆಹುತಿಯಾದ ಬೈಕ್

ಮುಂಡಗೋಡ: ಚಲಿಸುತ್ತಿದ್ದ ಬೈಕ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾದ ಪಟ್ಟಣದ ಬಂಕಾಪುರ ರಸ್ತೆಯ ದೇಸಾಯಿ ಮೆಡಿಕಲ್ ಬಳಿ ಘಟನೆ ನಡೆದಿದೆ. ಚಲಿಸುತ್ತಿದ್ದ ವೇಳೆ ಸ್ಪ್ಲೆಂಡರ್ ಬೈಕ್ ನ ಪೆಟ್ರೋಲ್ ಟ್ಯಾಂಕ್ ಭಾಗದಿಂದ ಇದ್ದಕ್ಕಿದ್ದಂತೆ ಹೊಗೆ ಬರಲಾರಂಭಿಸಿದೆ. ತಕ್ಷಣ ಚಾಲಕ ಭಯದಿಂದ ಬೈಕ್ ಬಿಟ್ಟು ಪಕ್ಕಕ್ಕೆ ಸರಿದಿದ್ದು, ಅಷ್ಟರಲ್ಲೇ ಟ್ಯಾಂಕ್ ಮೇಲಿನಿಂದ ಬೆಂಕಿ ಹೊತ್ತಿಕೊಂಡಿದೆ.

“ಹಾಯ್ ಹ್ಯಾಪಿ ಬರ್ತಡೇ””ಗಣಪ! ನೀನು ನನ್ನ ಆಸೆ ಈಡೇರಿಸ್ತಿಯಾ ಅಲ್ವಾ”? ವಿಭಿನ್ನವಾಗಿ ಲೆಟರ್ ಬರೆದು ಕಾಣಿಕೆ ಹುಂಡಿಗೆ ಹಾಕಿದ ಭಕ್ತ

ಈ ವೇಳೆ ಚಾಲಕ ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ಆರಿರಲಿಲ್ಲ. ಬಳಿಕ ಗೋಣಿಚೀಲಗಳಿಂದ ಬೈಕ್ ಅನ್ನು ಮುಚ್ಚಿ ಬೆಂಕಿ ನಂದಿಸಲಾಯಿತು. ಬೆಂಕಿ ನಂದಿಸಲು ಯಶಸ್ವಿಯಾದರೂ ಬೈಕ್ ಬಹುತೇಕ ಸುಟ್ಟುಹೋಗಿದೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button