Big NewsImportant
Trending

ನವಿಲು ಬೇಟೆ: ಆರು ಆರೋಪಿಗಳ ಬಂಧನ

ನವಿಲಿನ ಮೃತದೇಹ ಸಮೇತ ಬೇಟೆಗೆ ಬಳಸಿದ ಬಂದೂಕು ವಶಕ್ಕೆ

ಮುಂಡಗೋಡ: ನವಿಲು ಬೇಟೆಯಾಡಿದವರ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಆರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ, ಬಂಧಿತ ಆರೋಪಿಗಳಿಂದ ನವಿಲಿನ ಮೃತ ದೇಹದೊಂದಿಗೆ ಬೇಟೆಗೆ ಬಳಸಲಾದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಶಿರಸಿ ತಾಲೂಕಿನ ಕಸ್ತೂರಬಾ ನಗರ ನಿವಾಸಿ ಅಬ್ದುಲ್ ಸುಬಾನ, ಅಬ್ದುಲ ರೆಹಮಾನ ಶೇಖ್, ಮಹ್ಮದ ತಬ್ರೇಜ್ ಅಬ್ದುಲ ರೆಹಮಾನ ಸಾಬ್, ರಾಮನಬೈಲ್ ಗ್ರಾಮದ ಉಮೇಶ ಲಮಾಣಿ ಹಾಗೂ ಸಿದ್ದಾಪುರ ತಾಲೂಕಿನ ಅನಬೈಲ್ ಗ್ರಾಮದ ಲುಕ್ಮನ ಮಹ್ಮದಗೌಸ ಸಾಬ, ಮುಜೀಬ್ ಮಹ್ಮದಗೌಸ ಸಾಬ್ ಬಂಧಿತ ಆರೋಪಿಗಳು.

ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಯುವಕ: ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ

ಇವರೆಲ್ಲ ಕಾಡು ಪ್ರಾಣಿಗಳ ಬೇಟೆಗೆಂದು ಬಂದಿದ್ದು, ಈ ವೇಳೆ ನವಿಲು ಬೇಟೆ ಬೇಟೆಯಾಡಿ ಸಿಕ್ಕಿ ಬಿದ್ದಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಶೈಲ್ ವಾಲಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಚಂದ್ರಕಾoತ ಮುಕ್ರಿ, ಅರುಣ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಯಲ್ಲಾಪುರ

hitendra naik

Back to top button