“ಹಾಯ್ ಹ್ಯಾಪಿ ಬರ್ತಡೇ””ಗಣಪ! ನೀನು ನನ್ನ ಆಸೆ ಈಡೇರಿಸ್ತಿಯಾ ಅಲ್ವಾ”? ವಿಭಿನ್ನವಾಗಿ ಲೆಟರ್ ಬರೆದು ಕಾಣಿಕೆ ಹುಂಡಿಗೆ ಹಾಕಿದ ಭಕ್ತ

ದೇವರಿಗೆ ಪತ್ರ ಬರೆದ ಭಕ್ತ: ನಿವೇದನೆ ನೋಡಿ?

ಭಟ್ಕಳ: ಪರೀಕ್ಷೆಯಲ್ಲಿ ಪಾಸು ಮಾಡಿ ನನಗೆ ಪೊಲೀಸ್ ಕೆಲಸ ಸಿಗುವಂತೆ ಮಾಡಬೇಕಂದು ಭಟ್ಕಳ ಪೊಲೀಸ್ ಗಣಪತಿಯ ಕಾಣಿಕೆ ಹುಂಡಿಗೆ ಭಕ್ತನೋರ್ವ ಚೀಟಿ ಬರುದು ಹಾಕಿದ ಘಟನೆ ನಡೆದಿದೆ. ಭಟ್ಕಳ ನಗರ ಠಾಣೆ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐದು ದಿನಗಳ ಕಾಲ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಆಚರಿಸಿದ್ದರು. ಇದೆ ವೇಳೆಯಲ್ಲಿ ದೇವರ ದರ್ಶನ ಪಡೆಯಲು ಬಂದ ಭಕ್ತನೊರ್ವ ಗಣೇಶನಿಗೆ ತನ್ನ ಕನಸನ್ನು ಚೀಟಿ ಬರೆಯುವ ಮೂಲಕ ವ್ಯಕ್ತಪಡಿಸಿಕೊಂಡಿದ್ದಾನೆ.

ಶಾಲೆಯಲ್ಲಿ ಕಿಟಕಿಯ ಹೊರಗಡೆ ಇದ್ದ ಪೆನ್ಸಿಲ್ ತರುವಾಗ ಕಚ್ಚಿದ ಹಾವು: ವಿದ್ಯಾರ್ಥಿ ಗಂಭೀರ

ಪೊಲೀಸರು ಕಾಣಿಕೆಯನ್ನು ಲೆಕ್ಕಮಾಡುವ ವೇಳೆಯಲ್ಲಿ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಸಿಕ್ಕಿದೆ. “ಹಾಯ್ ಗಣಪ ಹ್ಯಾಪಿ ಬರ್ತಡೇ””ಗಣಪ ನೀನು ನನ್ನ ಆಸೆ ಈಡೇರಿಸ್ತಿಯಾ ಅಲ್ವಾ” ಏನು ಇಲ್ಲ ಚಿಕ್ಕ ಆಸೆ ನಾನು ಸ್ಟಡಿ ಮಾಡುತ್ತಾ ಇದ್ದೀನಿ. ಆರನೇ ತರಗತಿಯಿಂದ 10 ನೇ ತರಗತಿಯವರೆಗಿನ ಪುಸ್ತಕವನ್ನು ರೆಫರ್ ಮಾಡಿದ್ದೇನೆ. ಈಗಲೂ ಮಾಡ್ತಾ ಇದ್ದೇನೆ.

ನನಗೆ ಚಿಕ್ಕ ವಯಸ್ಸಿನಿಂದ ಪೊಲೀಸ್ ಆಗಬೇಕು ಎನ್ನುವ ಆಸೆ ಇದೆ. ಇಷ್ಟ ಪಟ್ಟು ಕಷ್ಟ ಪಟ್ಟು ಓದುತ್ತೇನೆ. ಆದರೆ ನೀನೆ ಪರೀಕ್ಷೆಯಲ್ಲಿ ಪಾಸು ಮಾಡಬೇಕು. ಈ ಭೂಮಿಯ ಮೇಲೆರುವ ಪ್ರತಿಯೊಬ್ಬರಿಗೂ ಒಳ್ಳೆಯದು ಮಾಡು. ಹಾಗೆ ಒಳ್ಳೆಯ ಬುದ್ದಿ ಕೊಡು. ಆದಷ್ಟು ಬೇಗ ಪರೀಕ್ಷೆಯಲ್ಲಿ ಪಾಸ್ ಆಗೋತರ ಮಾಡ್ಬೇಕು. ಮಾಡ್ತಿಯಾ ಅಲ್ವಾ. ಓಕೆ ಭಾಯ್ ಗಣಪ..! ಎಂದು ಚೀಟಿಯಲ್ಲಿ ವಿನಂತಿ ಮಾಡಿಕೊಂಡಿದ್ದಾನೆ”

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

land for sale
Exit mobile version