ಮೊಬೈಲ್ ತರಲು ಮರಳಿ ಬಂದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು
ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ
ಭಟ್ಕಳ: ತಾಲೂಕಿನ ಗಡಿ ಬಾಗವಾದ ಬೆಳಕೆಯ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಮೀಪದ ಮನೆಯೊಂದಕ್ಕೆ ಹಾಡುಹಗಲೇ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬೆಳಕೆಯ ತಿಮ್ಮಯ್ಯ ಕುಪ್ಪಯ್ಯ ನಾಯ್ಕ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಸುಮಾರು 6 ಸಾವಿರ ನಗದು, ಮೊಬೈಲ್ ಹಾಗೂ ಗೇರು ಬೀಜ ತುಂಬಿದ ಚೀಲವನ್ನು ಕದ್ದುಕೊಂಡು ಪರಾರಿಯಾಗಿದ್ದರು.
ಕಳ್ಳತನ ಮಾಡುವ ರಭಸದಲ್ಲಿ
ತಮ್ಮ ಮೊಬೈಲ್‍ನ್ನು ಘಟನೆಯ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದರು. ನಂತರ ಅದೆ ಸಮಯದಲ್ಲಿ ಕಳ್ಳರು ತಾವು ಬಿಟ್ಟ ಮೊಬೈಲ್‍ನ್ನು ತರಲೆಂದು ಅಲ್ಲಿ ಬಂದಿದ್ದಾರೆ. ಅನುಮಾನಗೊಂಡ ಗ್ರಾಮಸ್ಥರು ಕಳ್ಳರನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.
ಬಂಧಿತ ಆರೋಪಿ ಯೂನಸ್ ಮತ್ತು ಮೂದಾಸೀರ್ ಎಂದು ತಿಳಿದು ಬಂದಿದೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಒಟ್ಟು ಐವರು ಕಳ್ಳತನದಲ್ಲಿ ಇದ್ದಿರಬಹುದೆಂದು ಶಂಕಿಸಲಾಗಿದ್ದು ಇನ್ನು ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
6 ತಿಂಗಳ ಹಿಂದೆಯೂ ಇದೆ ಮನೆಯಲ್ಲಿ ಕಳ್ಳತನ ನಡೆದಿದ್ದು ಘಟನೆ ಮತ್ತೆ ಪುನರಾವರ್ತನೆಯಾಗಿದೆ. ಗ್ರಾಮಸ್ಥರಲ್ಲಿ ಇದರಿಂದ ಆತಂಕ ಹೆಚ್ಚಿದ್ದು ಕಳ್ಳರನ್ನು ಹಿಡಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ ಭಟ್ಕಳ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವಿಸ್ಮಯ ಟಿ.ವಿ ಫಲಶೃತಿ: ಹೆದ್ದಾರಿಯಲ್ಲಿ ಹೊಂಡ ಗುಂಡಿ ಮುಚ್ಚುವ ಕಾರ್ಯ ಆರಂಭ
- ಅನಂತ್ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸಿದ್ದು ನಾನೇ!
- ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಮುಂದುವರಿಯಲಿರುವ ಶೋಧ ಕಾರ್ಯಾಚರಣೆ
- ಆಟೋದಲ್ಲಿ ಪ್ಯಾಲೆಸ್ತೀನ್ ಬಂಬಲಿಸಿ ಧ್ವಜ: ಕೆಲವೇ ಗಂಟೆಯಲ್ಲಿ ಪೊಲೀಸರು ತೆರವುಗೊಳಿದ್ದು ಏಕೆ?
- ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment