Uttara Kannada
Trending

ಎಮ್ಮೆ ಮೇಯಿಸಲು ಹೋದ ವ್ಯಕ್ತಿ ಮೇಲೆ ಕರಡಿ ಗುಂಪಿನಿಂದ ದಾಳಿ; ಗಂಭೀರ ಗಾಯ

ಮರವೇರಲು ಯತ್ನಿಸಿದ ವ್ಯಕ್ತಿ
ಕಾಲನ್ನು ಹಿಡಿದು ಕೆಳಗೆಳೆದು ಗಾಯಗೊಳಿಸಿದ ಕರಡಿ

ಮುಂಡಗೋಡ: ಎಮ್ಮೆಗಳನ್ನು ಮೇಯಿಸಲು ಹೋದ ಸಮಯದಲ್ಲಿ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿದೆ.ಎರಡು ಮರಿ ಕರಡಿಗಳ ಸಹಿತ ಒಟ್ಟು ನಾಲ್ಕು ಕರಡಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.

ಗಡಿಭಾಗದ ದುಂಡಶಿ ಅರಣ್ಯ ವ್ಯಾಪ್ತಿಯಲ್ಲಿ ತಾಲೂಕಿನ ನ್ಯಾಸರ್ಗಿ ಗೌಳಿ ದಡ್ಡಿಯ ರಾಮು ಬಾಬು ಎಡಗೆ
20 ಎಮ್ಮೆಗಳನ್ನು ಮೇಯಿಸಲು ಹೋದಾಗ ಏಕಾಏಕಿ ಕರಡಿಗಳು ದಾಳಿ ನಡೆಸಿವೆ. ಭಯಗೊಂಡು ಪ್ರಾಣ ರಕ್ಷಣೆಗಾಗಿ ಮರವೇರಲು ರಾಮು ಪ್ರಯತ್ನಿಸಿದ್ದಾನೆ.

ಗುಂಪಿನಲ್ಲಿದ್ದ ಒಂದು ಕರಡಿ ಈತನ ಕಾಲನ್ನು ಹಿಡಿದು ನೆಲಕ್ಕೆ ಬೀಳಿಸಿ ಗಾಯಗೊಳಿಸಿವೆ. ಅವುಗಳಿಂದ ತಪ್ಪಿಸಿಕೊಂಡು ಗ್ರಾಮದತ್ತ ಬಂದಿದ್ದಾನೆ. ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹುಬ್ಬಳ್ಳಿ ಕಿಮ್ಸ್ ಗೆ ಕರೆದೊಯ್ಯಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Related Articles

Back to top button