Follow Us On

WhatsApp Group
Important
Trending

ಅಡುಗೆಕೋಣೆಯಲ್ಲಿದ್ದ ಮಿಕ್ಸರ್ ಮೇಲೆ ಮಲಗಿದ್ದ ಬೃಹತ್ ಕಾಳಿಂಗ ಸರ್ಪ: ಚಹ ಮಾಡಲು ಹೋದಾಗ ಆಗಿದ್ದೇನು?

ಕುಮಟಾ: ಸುಮಾರು 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರಗ ತಜ್ಞ ಪವನ್ ನಾಯ್ಕ ರಕ್ಷಣೆ ಮಾಡಿದ ಘಟನೆ ತಾಲೂಕಿನ ಯಲವಳ್ಳಿಯಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ 6 ಘಂಟೆಗೆ ಮನೆಯ ಅಡುಗೆ ಕೋಣೆಯಲ್ಲಿ ಬೃಹತ್ ಹಾವೊಂದು ಮಿಕ್ಸರ್ ಮೇಲೆ ಸುರುಳಿ ಸುತ್ತಿ ಮಲಗಿರುವುದು ಕಂಡು ಬಂದಿದೆ. ಚಹ ಮಾಡಲೆಂದು ಅಡುಗೆ ಕೋಣೆ ಬಂದಾಗ ಕಪ್ಪಗಾಗಿರುವ ನೀಳವಾದ ದೇಹವನ್ನು ಕಂಡು ಕೇರೆ ಹಾವೆಂದು ತಿಳಿದು ತುಂಬಾ ಸಮೀಪದಿಂದ ಮನೆಯ ಹೋರಗೆ ಓಡಿಸಲು ಪ್ರಯತ್ನಿಸಿದಾಗ ಹಾವು ಹೆಡೆ ಬಿಚ್ಚಿದೆ.

ಇದನ್ನೂ ಓದಿ: HAL Recruitment: 182 ಹುದ್ದೆಗಳಿಗೆ ನೇಮಕಾತಿ: ಕನಿಷ್ಠ 43 ಸಾವಿರ ಮಾಸಿಕ ವೇತನ

ನಂತರ ಉರಗ ತಜ್ಞರಾದ ಪವನ್ ನಾಯ್ಕ ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದ್ದು, ಕರೆಗೆ ಸ್ಪಂಧಿಸಿ ಶೀಘ್ರವೇ ಸ್ಥಳಕ್ಕಾಗಮಿಸಿದ ಪವನ ನಾಯ್ಕ ಕಾಳಿಂಗವನ್ನು ಸೆರೆ ಹಿಡಿದು, ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಈ ಒಂದು ವಾರದಲ್ಲಿ 3 ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವುದಾಗಿ ಪವನ್ ನಾಯ್ಕ ಅವರು ನಮ್ಮ ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.ಯಲವಳ್ಳಿಯ ಗಣೇಶ್ ಭಟ್ಟ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button