ಶಾಲೆಯಲ್ಲಿ ಕಿಟಕಿಯ ಹೊರಗಡೆ ಇದ್ದ ಪೆನ್ಸಿಲ್ ತರುವಾಗ ಕಚ್ಚಿದ ಹಾವು: ವಿದ್ಯಾರ್ಥಿ ಗಂಭೀರ

ಭಟ್ಕಳ: ಶಾಲೆಯಲ್ಲಿ ಹಾವು ಕಚ್ಚಿ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಟ್ಕಳದ ಮುರ್ಡೇಶ್ವರ ನ್ಯಾಷನಲ್ ಕಾಲನಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.5ನೇ ತರಗತಿಯ ವಿದ್ಯಾರ್ಥಿ ಅಲ್ಫಾಝ್ ಸರ್ತಾಝ್ ಹಾವಿನ ಕಡಿತಕ್ಕೊಳಗಾದವನು.

ಚೌತಿ ಸಂಭ್ರಮ ಮುಗಿಸಿದ್ದ ಮನೆಯಲ್ಲಿ ಶೋಕ : ದೈವಭಕ್ತಿ ಪ್ರತಿಬಿಂಬದ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

ತರಗತಿಯಲ್ಲಿದ್ದ ವೇಳೆ ಕಿಟಕಿಯ ಹೊರಗೆ ಪೆನ್ಸಿಲ್ ಬಿದ್ದಿದ್ದು, ಅದನ್ನು ತರಲು ಹೊರಗೆ ಹೋಗುತ್ತಿದ್ದ ವೇಳೆ ಹಾವು ಬಾಲಕನ ಕಾಲಿಗೆ ಕಚ್ಚಿದೆ ಎನ್ನಲಾಗಿದೆ. ಕೂಡಲೇ ವಿದ್ಯಾರ್ಥಿಯನ್ನು ಮುರ್ಡೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಭಟ್ಕಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಹಾವು ಕಚ್ಚಿದ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರಕಾರಿ ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ವಿಸ್ಮಯ ನ್ಯೂಸ್‌ ಉದಯ್‌ಎ ಸ್ ನಾಯ್ಕ ಭಟ್ಕಳ

Exit mobile version