ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,549ಕ್ಕೆ ಏರಿಕೆ
ಹೊನ್ನಾವರದಲ್ಲಿ ಇಂದು 17 ಮಂದಿ ಬಿಡುಗಡೆ
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 31 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಮಾವಳ್ಳಿ 3, ತಲಗೇರಿ 4, ಮಿರ್ಜಾನ್ 2, ಅಳ್ವೇಕೊಡಿ 2, ಸೋನಾರ್‌ಕೇರಿ 3, ಬೆಟ್ಕುಳಿ 2 ಸೇರಿದಂತೆ ಮಾಸೂರ್, ವಿವೇಕ ನಗರ, ಕೋಡ್ಕಣಿ, ಗೋಕರ್ಣ, ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.
ಕೊಡ್ಕಣಿಯ 53 ವರ್ಷದ ಪುರುಷ, ಹಿರೇಗುತ್ತಿಯ 60 ವರ್ಷದ ವೃದ್ಧೆ, ಬೆಟ್ಕುಳಿಯ 66 ವರ್ಷದ ವೃದ್ಧ, 50 ವರ್ಷದ ಪುರುಷ, ಮಾವಳ್ಳಿ 75 ವರ್ಷದ ವೃದ್ಧ, 66 ವರ್ಷದ ವೃದ್ಧೆ, 65 ವರ್ಷದ ವೃದ್ಧೆ, ಗೋಕರ್ಣದ 52 ವರ್ಷದ ಪುರುಷ, ಕುಮಟಾದ 38 ವರ್ಷದ ಮಹಿಳೆ, 42 ವರ್ಷದ ಪುರುಷ, ಹೆಗಡೆಯ 57 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.
ಅಳ್ವೆಕೋಡಿಯ 51 ವರ್ಷದ ಪುರುಷ, 41 ವರ್ಷದ ಮಹಿಳೆ, ಮಿರ್ಜಾನ್‌ದ 82 ವರ್ಷದ ವೃದ್ಧೆ, ದೇವರಬಾವಿಯ 9 ವರ್ಷದ ಬಾಲಕಿ, ತಲಗೇರಿಯ 40 ವರ್ಷದ ಮಹಿಳೆ, 72 ವರ್ಷದ ವೃದ್ಧ, 19 ವರ್ಷದ ಯುವತಿ, ತಲಗೇರಿಯ 45 ವರ್ಷದ ಮಹಿಳೆ, ಹರುಮಾಸ್ಕೇರಿಯ 39 ವರ್ಷದ ಮಹಿಳೆ, 38 ವರ್ಷದ ಮಹಿಳೆ, 28 ವರ್ಷದ ಯುವಕ, 37 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹೆಗಡೆಯ 13 ವರ್ಷದ ಬಾಲಕಿ, ಸೋನಾರ್‌ಕೇರಿಯ 35 ವರ್ಷದ ಮಹಿಳೆ, 49 ವರ್ಷದ ಪುರುಷ, 35 ವರ್ಷದ ಮಹಿಳೆ, ಮಿರ್ಜಾನ್‌ದ 45 ವರ್ಷದ ಪುರುಷ, 14 ವರ್ಷದ ಬಾಲಕ, ಮಾಸೂರಿನ 42 ವರ್ಷದ ಪುರುಷ, ವಿವೇಕ ನಗರದ 50 ವರ್ಷದ ಮಹಿಳೆಯಲ್ಲಿ ಸೊಂಕು ಕಾಣಿಸಿಕೊಂಡಿದೆ. ಇಂದು 31 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1549 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 9 ಪಾಸಿಟಿವ್
ಹೊನ್ನಾವರ: ತಾಲೂಕಿನಲ್ಲಿ ಇಂದು 9 ಜನರಲ್ಲಿ ಕರೊನಾ ದೃಢಪಟ್ಟಿದೆ. ಹೊನ್ನಾವರ ಪಟ್ಟಣದ ಬಾಂದೆಹಳ್ಳದಲ್ಲಿ-1 ಮತ್ತು ಗ್ರಾಮೀಣ ಭಾಗದಲ್ಲಿ 8 ಕೇಸ್ ಕಾಣಿಸಿಕೊಂಡಿದೆ. ಗ್ರಾಮೀಣ ಭಾಗವಾದ ಚಂದಾವರ-2, ಹಳದೀಪುರ 3, ಕವಲಕ್ಕಿ 1, ದುಗ್ಗುರು 1, ಮುಗ್ವಾ 1 ಕೇಸ್ ದೃಢಪಟ್ಟಿದೆ.
ಚಂದಾವರದ 70 ವರ್ಷದ ಪುರುಷ, 69 ವರ್ಷದ ಮಹಿಳೆ, ಮುಗ್ವಾದ 40 ವರ್ಷದ ಪುರುಷ, ಕವಲಕ್ಕಿಯ 31 ವರ್ಷದ ಮಹಿಳೆ, ಹಳದೀಪುರದ 54 ವರ್ಷದ ಪುರುಷ, 83 ವರ್ಷದ ಪುರುಷ, 76 ವರ್ಷದ ಪುರುಷ, ದುಗ್ಗುರಿನ 55 ವರ್ಷದ ಪುರುಷ ಸೇರಿದಂತೆ ಇಂದು ಒಟ್ಟು 8 ಜನರಲ್ಲಿ ಸೋಕು ಕಾಣಿಸಿಕೊಂಡಿದೆ.
ಇಂದು 17 ಜನರು ಡಿಸ್ಚಾರ್ಜ್ ಆಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 13 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 80 ಜನರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಬಾವಿಗೆ ಬಿದ್ದು ಹೆಣ್ಣು ಚಿರತೆ ಸಾವು
- ಜಿಂಕೆ ಬೇಟೆ: 33 ಕೆ.ಜಿ ಮಾಂಸ ವಶಕ್ಕೆ: ಆರೋಪಿ ಬಂಧನ
- ಶಿರೂರು ದುರಂತ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹ: NHAI ಕಚೇರಿಗೆ ಮುತ್ತಿಗೆ ಹಾಕಲು ಯತ್ನ
- ಅಡಿಕೆ ಮಾನ ಕಳೆಯುತ್ತಿದೆ ಅಗ್ಗದ ಬರ್ಮಾ ಅಡಿಕೆ! TSS ವ್ಯಾಪಾರಿ ಅಂಗಳದಲ್ಲಿ ಬರ್ಮಾ ದೇಶದ ಚಾಲಿ: ಏನಾಯ್ತು ನೋಡಿ?
- ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ : ಕ್ಯಾಮೆರಾ ಬದಿಗೆ ಸರಿಸಿ, ಡಿವಿಆರ್ ನಾಶಪಡಿಸಿದ ಚಾಲಾಕಿ ಕಳ್ಳರು