ಮಾಹಿತಿ
Trending

ಅಂಕೋಲಾದಲ್ಲಿ0ದು 5 ಕೊವಿಡ್ ಕೇಸ್

ಗುಣಮುಖ11 : ಸಕ್ರಿಯ68
ಶುಕ್ರವಾರ ಹಲವೆಡೆ ಕೊವಿಡ್ ಟೆಸ್ಟ್ ಕ್ಯಾಂಪ್

ಅoಕೋಲಾ : ತಾಲೂಕಿನಲ್ಲಿ ಗುರುವಾರ ಒಟ್ಟೂ5 ಹೊಸ ಕೊವಿಡ್ ಕೇಸ್‌ಗಳು ದಾಖಲಾಗಿದೆ. ಹಾರವಾಡ, ಮಂಜಗುಣಿ, ಬೆಳಂಬಾರ, ವಂದಿಗೆ, ಬಂಡಿಕಟ್ಟೆ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇಂದು ಸೋಂಕು ಮುಕ್ತರಾದ 11ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್ ನಲ್ಲಿರುವ 48ಮಂದಿ ಸಹಿತ ಒಟ್ಟೂ 74ಸಕ್ರಿಯ ಪ್ರಕರಣಗಳಿವೆ.

ಕೊವಿಡ್ ಟೆಸ್ಟ್ ಕ್ಯಾಂಪ್:

ಶುಕ್ರವಾರ ಬೇಲೇಕೇರಿ ಪೋಲೀಸ್ ಸ್ಟೇಶನ್ ಏರಿಯಾ, ಲಕ್ಷ್ಮೇಶ್ವರ, ವಂದಿಗೆ ಆಯ್.ಬಿ ಹತ್ತಿರದ ಪ್ರದೇಶ, ಹಾರವಾಡ, ಚಿನ್ನಾಮಕ್ಕಿ, ಮಾರುಗದ್ದೆ, ಹೆಗ್ಗಾರಮಕ್ಕಿ ಮತ್ತಿತರ ಪ್ರದೇಶಗಳಲ್ಲಿ ವಿಶೇಷ ಕೊವಿಡ್ ಟೆಸ್ಟ್ ಕ್ಯಾಂಪ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮತ್ತು ಸ್ಥಳೀಯ ಮುಖಂಡರು ಹಾಗೂ ವಿವಿಧ ಕರೊನಾ ವಾರಿಯರ್ಸ್ಗಳು ಇಲಾಖೆ ಮತ್ತು ಕೊವಿಡ್ ಟೆಸ್ಟ್ ಸಿಬ್ಬಂಧಿಗಳ ಜೊತೆ ಸಹಕರಿಸುವಂತೆ ತಾಲೂಕಾ ಆರೋಗ್ಯಾಧಿಕಾರಿ ಡಾ. ನಿತಿನ್ ಕೋರಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button