ಭಟ್ಕಳದಲ್ಲೂ ಸದ್ದು ಮಾಡುತ್ತಿದೆ ಗಾಂಜಾ ನಶೆ: ಜಿಲ್ಲೆಯ ಎಲ್ಲಡೆ ಹಬ್ಬಿದ್ಯಾ ಮಾದಕಜಾಲ?
ಶಿರಸಿ ಬಳಿಕ ಭಟ್ಕಳದಲ್ಲಿ ಬೇಟೆ ಆರಂಭಿಸಿದ ಪೊಲೀಸರು

ಭಟ್ಕಳದ ಜಾಲಿ ಬೀಚ್ ಸಮೀಪ ಗಾಂಜಾ ಮಾರಾಟ. ನಾಲ್ವರನ್ನು ಬಂಧಿಸಿದ ಪೊಲೀಸರು
ಭಟ್ಕಳ : ತಾಲೂಕಿನ ಜಾಲಿ ಬೀಚ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿ ಸೈಯದ್ ಅಕ್ರಮ, ಸೈಯದ್ ಮೂಸಾ,ರೂಪೇಶ ಮೊಗೇರ, ಹೇಮಂತ ನಾಯ್ಕ ಎಂದು ತಿಳಿದು ಬಂದಿದೆ.
ಆರೋಪಿಗಳು ಭಟ್ಕಳದ ಜಾಲಿ ಬೀಚ್ ರಸ್ತೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 250 ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಇಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಒಟ್ಟು 250 ಗ್ರಾಂ ಗಾಂಜಾ, ಒಂದು ಬೈಕ್, ಒಂದು ಕಾರ್, ಎರಡು ಮೊಬೈಲ್ ಸೇರಿದಂತೆ 5700 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಶ್ರೀ ಶಿವಪ್ರಕಾಶ ದೇವರಾಜ ಹಾಗೂ ಎಸ್.ಬದ್ರಿನಾಥ ಹೆಚ್ಚುವರಿ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಅರವಿಂದ ಪೊಲೀಸ ಉಪಾಧೀಕ್ಷಕರು ಭಟ್ಕಳ ಉಪವಿಭಾಗ ನೇತೃತ್ವದಲ್ಲಿ ದಿವಾಕರ ಸಿ.ಪಿ.ಐ ಮುಂದಾಳತ್ವದಲ್ಲಿ ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ಭರತಕುಮಾರ ಎಚ್.ಪಿ.ಕುಡಗುಂಟಿ, ಸಿಬ್ಬಂದಿಗಳಾಸ ಎ.ಎಸ್.ಐ ಗೋಪಾಲ ನಾಯಕ, ದಿನೇಶ ನಾಯಕ, ಮದರಸಾಬ ಚಿಕ್ಕೇರಿ, ನಾಗರಾಜ ಮೊಗೇರ, ಲೋಕೇಶ ಕತ್ತಿ, ಈರಣ್ಣ ಪೂಜಾರಿ, ಸಿದ್ದು ಕಾಂಬಳೆ, ಗೌತಮ ರೊಡ್ಡಣ್ಣ ಮಲ್ಲಿಕಾರ್ಜುನ ಉಟಗಿ, ರಾಜು ಗೌಡ, ವಿಶೇಷ ತಂಡದ ಸಿಬ್ಬಂದಿಯವರಾದ ಸಂತೋಷ ಹೊನ್ನಾಳ, ಮೋಹನ ಪೂಜಾರಿ ಚಾಲಕರಾದ ದೇವರಾಜ ಮೊಗೇರ, ಕುಬೇರ ಹೊಸುರ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.
ಶಿರಸಿಯಲ್ಲಿ ಕಳೆದ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಇದುವರೆಗೂ 18 ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಭಟ್ಕಳದಲ್ಲಿ ಬೇಟೆ ಆರಂಭವಾಗಿದ್ದು, ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅತಿ ವೇಗದ ಚಾಲನೆ ತಂದ ಅವಾಂತರ: ಬೈಕ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಲಾರಿ
- Maharudra Yaga: ಭವ್ಯ ಭಾರತಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಸಂಕಲ್ಪ: ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಮಹಾರುದ್ರ ಯಾಗ
- ಒತ್ತುವರಿ ತೆರವಿಗೆ ರಾಜ್ಯಮಟ್ಟದ ಕಾರ್ಯಪಡೆ ;ಅರಣ್ಯ ಸಚಿವರ ಟಿಪ್ಪಣೆಗೆ ಆಕ್ಷೇಪ
- KFD Recruitment: ಉದ್ಯೋಗಾವಕಾಶ:310 ಹುದ್ದೆಗಳು: SSLC ಆದವರು ಅರ್ಜಿ ಸಲ್ಲಿಸಬಹುದು
- Health Camp: ಅಕ್ಟೋಬರ್ 1 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ: ಒಂದು ವಾರ ಅಕ್ಯುಪ್ರೆಷರ್ ಶಿಬಿರ
